






ಬಿಲ್ಲವ ಸಂಘದ ಬೆಳವಣಿಗೆಗೆ ಮಹಿಳಾ ವೇದಿಕೆಯ ಕೊಡುಗೆ ಅನನ್ಯ-ಸತೀಶ್ ಕುಮಾರ್ ಕೆಡೆಂಜಿ


ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬಿಲ್ಲವ ಸಂಘಗಳಲ್ಲಿ ಒಂದಾದ ಪುತ್ತೂರು ತಾಲ್ಲೂಕು ಬಿಲ್ಲವ ಸಂಘವು ಸಮಾಜಮುಖಿ ಕಾರ್ಯಗಳ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರಲ್ಲಿ ಸಮಾಜ ಬಾಂಧವರ ಕೊಡುಗೆ ಮಹತ್ತರವಾದುದು. ಇದರೊಂದಿಗೆ ಬಿಲ್ಲವ ಸಂಘದ ಬೆಳವಣಿಗೆಗೆ ತಾಲೂಕು ಮಹಿಳಾ ವೇದಿಕೆಯ ಕೊಡುಗೆ ಅನನ್ಯ ಎಂದು ಅವಿಭಜಿತ ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.




ಅವರು ಜೂ.26ರಂದು ಬಪ್ಪಳಿಗೆ-ಬೈಪಾಸ್ ನಲ್ಲಿನ ಹೇಮಂತ್ ಕುಮಾರ್ ಸಭಾ ಭವನದಲ್ಲಿ ಜರಗಿದ ತಾಲೂಕು ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವೇದಿಕೆಯ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ ಮಾತನಾಡಿ ಸಂಘಟನೆಯ ಬೆಳವಣಿಗೆ, ಮಹಿಳಾ ಸಬಲೀಕರಣ, ಸಮಾಜ ಸೇವೆಗೆ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಮಹಿಳಾ ವೇದಿಕೆಯ ಸಂಚಾಲಕ ಚಂದಪ್ಪ ಪೂಜಾರಿ ಕಾಡ್ಲ ಮತ್ತು ಮಹಿಳಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಗ್ರಾಮ ಸಮಿತಿಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಂಘಟನೆಯ ಬಲವರ್ಧನೆಗೆ ಸಲಹೆಗಳನ್ನು ನೀಡಿದರು. ಹನ್ಶಿಕ್ ಡೆಕ್ಕಾಜೆ ಪ್ರಾರ್ಥಿಸಿದರು. ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶ್ವೇತಾ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರೀತಿಕಾ ವಂದಿಸಿದರು. ಕಾರ್ಯದರ್ಶಿ ಗೀತಾ ಕುರೆಮಜಲು ವಾರ್ಷಿಕ ವರದಿ ಮಂಡಿಸಿ, ಕೋಶಾಧಿಕಾರಿ ಪ್ರೇಮಲತಾ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷೆ ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು.
ವರದಿ ಸಾಲಿನಲ್ಲಿ ಮಹಿಳಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ವಿಮಲಾ ಸುರೇಶ್ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ ಇವರುಗಳನ್ನು ಗೌರವಿಸಲಾಯಿತು.









