ಪುತ್ತೂರು ಬೈಪಾಸ್ ನ ರವೀಂದ ಕಾಂಪ್ಲೆಕ್ಸ್ ನಲ್ಲಿ ಚಿರುಂಭಾ ಎಸೋಸಿಯೇಟ್ಸ್ ಶುಭಾರಂಭ

0

ಪುತ್ತೂರು: ಬೈಪಾಸ್ ರಸ್ತೆಯ ಹೊಟೆಲ್ ಪ್ರಾರ್ಥನಾ‌ ಗಾರ್ಡನ್ ನ ಮುಂಭಾಗದಲ್ಲಿರುವ ರವೀಂದ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ಚಿರುಂಭ ಎಸೋಸಿಯೇಟ್ಸ್ ಸಂಸ್ಥೆಯನ್ನು ಅಂಚೆ ಇಲಾಖೆಯ ನಿವೃತ್ತ ಪೋಸ್ಟ್‌ಮಾಸ್ಟರ್ ಹಾಗೂ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ನಾಯ್ಕ್ ಅವರು ಉದ್ಘಾಟಿಸಿದರು.




ಸಂಸ್ಥೆಯ ಮಾಲಕರ ತಂದೆ ರಾಜಾರಾಮ ನಾಯ್ಕ್ ತಾಯಿ ಶಾರದ ರಾಜಾರಾಮ್ ರವರು ದೀಪ ಬೆಳಗಿಸಿದರು. ಮಹಾಮಾಯಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶೀನಾ ನಾಯ್ಕ್, ಮರಾಟಿ ಸಮಾಜ ಸೇವಾ ಸಂಘ, ಪುತ್ತೂರು ಅಧ್ಯಕ್ಷ ಕರುಣಾಕರ ನಾಯ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಟ್ರಸ್ಟಿ ಜಾನು ನಾಯ್ಕ್, ಪ್ರಮುಖರಾದ ಕೆ. ಜಾನು ನಾಯ್ಕ್ ಕೃಷ್ಣನಗರ, ಸುಬ್ಬಣ್ಣ ನಾಯ್ಕ್ ಕೃಷ್ಣನಗರ, ಎಲ್.ಐ.ಸಿ.ಯ ಗೋವಿಂದ ನಾಯ್ಕ್ ಹಚ್.ಈ.ಎಫ್.ಅಧ್ಯಕ್ಷರಾದ ಮೋಹನ್ ಪಾಟಾಲಿ, ಪುತ್ತೂರು ಜೆಸಿಐ ನ ಖಜಾಂಜಿ ಸತೀಶ್ ಕೆ., ಹೈಯರ್
ಕಂಪೆನಿಯ ಆರ್‌.ಎಸ್.ಓ. ನಾಗೇಂದ್ರ, ಪುತ್ತೂರಿನ ಮಾನಸ ಗಂಗಾ ಸಹಕಾರಿ ಸಂಘದ ಸಿಬ್ಬಂದಿ ಪ್ರಜ್ವಲ್ ಸೇರಿದಂತೆ ಹಲವಾರು ಬಂದು ಶುಭಹಾರೈಸಿದರು.
ಸಂಸ್ಥೆಯ ಮಾಲಕರಾದ ವಿನಯ್ ಸ್ವಾಗತಿಸಿದರು.


ಗುಣಮಟ್ಟದ ವಸ್ತುಗಳ ಅತೀ ಕಡಿಮೆ ದರಗಳಲ್ಲಿ ಲಭ್ಯ

ನಮ್ಮ ಸಂಸ್ಥೆಯಲ್ಲಿ ಎಸಿಪಿ ಶೀಟ್‌ಗಳು, ಪ್ಲೋಟೆಡ್ ಪ್ಯಾನಲ್ಸ್, ಲೋವರ್ ,ಅಲ್ಯುಮಿನಿಯಂ ಎಕ್ಸ್‌ಟ್ರೋಷನ್ಸ್, ಡೋರ್ ಹಾಗೂ ವಿಂಡೋಸ್,
ಮೋಡ್ಯುಲರ್ ಕಿಚನ್, ವಾಡ್ರೋಬ್ ಗಳು,
ಟಿವಿ ಯುನಿಟ್ಸ್, ಪಿವಿಸಿ ಶೀಟ್ಸ್, ಯುವಿ ಮಾರ್ಬಲ್ ಶೀಟ್ಸ್, ಸ್ಲೈಡಿಂಗ್ ವಿಂಡೋಸ್ ಮೊದಲಾದವುಗಳು ಲಭ್ಯವಿದ್ದು, ಗ್ರಾಹಕರ ಮನಸಿಗೊಪ್ಪುವ ರೀತಿಯಲ್ಲಿ ಅತೀ ಕಡಿಮೆದರದಲ್ಲಿ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ನೀಡಲಾಗುವುದು.
ವಿನಯ್, ಮಾಲಕರು

LEAVE A REPLY

Please enter your comment!
Please enter your name here