ಈಶ್ವರಮಂಗಲ  ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ರೋಹಿಣಿ ಶಿವರಾಮ್, ಕಾರ್ಯದರ್ಶಿಯಾಗಿ ಕುಸುಮ ಆಯ್ಕೆ 

ಬಡಗನ್ನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ಲದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಪುತ್ತೂರು ಈಶ್ವರಮಂಗಲ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆಯು ಜು.4 ರಂದು ಈಶ್ವರಮಂಗಲ ಶ್ರೀ ಗಜಾನನ  ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಒಕ್ಕೂಟ ಅಧ್ಯಕ್ಷ ದಿನೇಶ್ ರೖೆ ಕುತ್ಯಾಳ ಹಾಗೂ ಕಾಮಧೇನು ತಂಡದ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಅರಿಯಡ್ಕ ವಲಯದ ವಲಯ ಮೆಲ್ವಿಚಾರಕಿ ಪ್ರಣೀತಾ ಯೋಜನೆಯ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಒಕ್ಕೂಟದ  ಉಪಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ರೋಹಿಣಿ ಶಿವರಾಮ್, ಜೂತೆ ಕಾರ್ಯದರ್ಶಿ ಸುಶೀಲ, ಕೋಶಾಧಿಕಾರಿ ಮಮತಾ ಸೇವಾಪ್ರತಿನಿಧಿಗಳಾದ ಲೀಲಾವತಿ ಹಾಗೂ ಸುಂದರ್ ಜಿ ಉಪಸ್ಥಿತರಿದ್ದರು. ಸಭೆಯಲ್ಲಿ  ಪ್ರಗತಿಬಂಧು ಸ್ವ ಸಹಾಯ ಸಂಘಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಕಾಮಧೇನು ತಂಡದ ಸದಸ್ಯರಾದ  ಸುಲಕ್ಷಣ ಸ್ವಾಗತಿಸಿ, ದಿವ್ಯಶ್ರೀ  ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ರೋಹಿಣಿ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:
2026-27 ನೇ ಸಾಲಿನ ಒಕ್ಕೂಟದ ನೂತನ ಅಧ್ಯಕ್ಷರಾಗಿ ರೋಹಿಣಿ ಶಿವರಾಮ್,  ಕಾರ್ಯದರ್ಶಿಯಾಗಿ  ಕುಸುಮ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ದೇವಕಿ,  ಜೊತೆ ಕಾರ್ಯದರ್ಶಿಯಾಗಿ ದಿನೇಶ್ ರೖೆ ಕುತ್ಯಾಳ ಹಾಗೂ ಕೋಶಾಧಿಕಾರಿಯಾಗಿ ಬಾಲಕೃಷ್ಣ ನಾಯ್ಕರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here