







ಪುತ್ತೂರು: ಉರ್ಲಾಂಡಿ ತೋಟದಮನೆ ನಿವಾಸಿ ಸುರೇಂದ್ರ ಹೆಗ್ಡೆ (72.ವ) ಬ್ರೈನ್ ಸ್ಟ್ರೋಕ್‌ನಿಂದ ಜು.4ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಜು.3ರಂದು ಎಂದಿನಂತೆ ರಾತ್ರಿ ಪೇಟೆಯಿಂದ ಉರ್ಲಾಂಡಿ ಮನೆಗೆ ತೆರಳುತ್ತಿದ್ದ ಇವರು ಉರ್ಲಾಂಡಿ ಬೈಪಾಸ್ ಬಳಿ ಏಕಾಏಕಿ ಕುಸಿದು ಬಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಾದರೂ ಮೆದುಳಿನಲ್ಲಿ ರಕ್ತ ಸಂಚಾರ ಸ್ಥಗಿತಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಜು.4ರಂದು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.



ಪುತ್ತೂರು ಉರ್ಲಾಂಡಿಯಲ್ಲಿರುವ ತಾಯಿಯ ಮನೆಯಲ್ಲಿ ಸಹೋದರ ಪುಷ್ಪರಾಜ್ ಹೆಗ್ಡೆಯವರೊಂದಿಗೆ ನೆಲೆಸಿದ್ದರು. ಮೃತರು ಸಹೋದರರಾದ ಮೋಹನ್ ಹೆಗ್ಡೆ, ರಾಜೇಂದ್ರ ಹೆಗ್ಡೆ, ಪುಷ್ಪರಾಜ್ ಹೆಗ್ಡೆ, ನವೀನ್ ಹೆಗ್ಡೆ, ಸಹೋದರಿಯರಾದ ಸರೋಜ, ಮೋಹಿನಿ, ಸುಮಿತ್ರ, ಮೀರ ರವರನ್ನು ಅಗಲಿದ್ದಾರೆ.










