







ಪುತ್ತೂರು: ಜಿಮ್ ತರಬೇತುದಾರ, ಇಲ್ಲಿನ ಕಲ್ಲಿಮಾರ್ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಮಡಂತ್ಯಾರ್ ಮೂಲದ ಸಚಿನ್ ರೈ ಅವರು ಜು.5ರಂದು ನಿಧನರಾಗಿದ್ದಾರೆ.


ಸಚಿನ್ ರೈ ಅವರು ಕಲ್ಲಿಮಾರ್‌ನ ಸಂಬಂಧಿಕರ ಮನೆಯಲ್ಲಿ ಜು.5ರಂದು ಬೆಳಗ್ಗೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.



ಮೃತರು ತಾಯಿ ಗುಲಾಬಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಆದರೆ ಸಚಿನ್ ರೈ ಅವರ ಸಾವಿನಲ್ಲಿ ಸಂಶಯವಿದೆ ಎಂದು ಅವರ ತಾಯಿ ಗುಲಾಬಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










