







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ವಿದ್ಯಾರ್ಥಿಗಳಿಗಾಗಿ ವಿಶೇಷ ‘ಮಾನಸಿಕ ಆರೋಗ್ಯ ಜಾಗೃತಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.



ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸೇವೆಯಾದ ಬೆಂಗಳೂರಿನ ನಿಮ್ಹಾನ್ಸ್ (NIMHANS) ಸಂಸ್ಥೆಯ ‘ಟೆಲಿ ಮನಸ್’ ಯೋಜನೆಯ ಮೀಡಿಯಾ ಮ್ಯಾನೇಜರ್ ಆಗಿರುವ ಶೋಭಿತಾ ಎನ್ ಮಿಂಚಿಪದವು ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪರೀಕ್ಷಾ ಭಯ, ಆತಂಕ, ಒತ್ತಡ, ಮಕ್ಕಳ ಸುರಕ್ಷತೆ ಹಾಗೂ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳುವ ಬಗ್ಗೆ ಸಂವಾದ ನಡೆಸಿದರು ಜೊತೆಗೆ, ತುರ್ತು ನೆರವಿಗಾಗಿ ಟೆಲಿ ಮನಸ್ ಶುಲ್ಕ ರಹಿತ ಸಂಖ್ಯೆ 14416 ಹಾಗೂ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆ 1098 ಬಗ್ಗೆಯೂ ಮಾಹಿತಿ ನೀಡಿದರು.



ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಾರಾದ ರಮೇಶ್ ಶಿರ್ಲಾಲ್ ಇವರು ಸ್ವಾಗತಿಸಿದರು ಮತ್ತು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಇಂತಹ ಜಾಗೃತಿ ತರಗತಿಗಳು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಶಿಕ್ಷಕಿಯರಾದ ಪ್ರವೀಣ ಕುಮಾರಿ, ವಿಜೇತ ಕೆ, ಸಾವಿತ್ರಿ ಕೆ, ಬಿಂದು ಕೆ ಎಸ್, ಹಲೀಮ ನಜಿಮುನ್ನಿಸಾ, ಭವ್ಯ , ಲತಾ ರಮೇಶ್, ಅಸ್ಮ ಕೆ ಪಿ ಹಾಗೂ ಶಾರದಾ ಇವರು ಸಹಕರಿಸಿದರು..
ಟೆಲಿ ಮಾನಸ್’ 14416 (ಶುಲ್ಕ ರಹಿತ ಸಂಖ್ಯೆ) ಎಂಬುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಬೆಂಗಳೂರಿನ ನಿಮ್ಹಾನ್ಸ್ (NIMHANS) ಸಂಸ್ಥೆಯು ನಿರ್ವಹಿಸುವ ಉಚಿತ, ಎಲ್ಲಾ ಭಾಷೆಗಳಲ್ಲೂ 24/7 ಲಭ್ಯವಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸೇವೆಯಾಗಿದೆ.










