ಒಳಮೊಗ್ರು CSC ಸೇವಾಕೇಂದ್ರದಲ್ಲಿ ಡಿಜಿ ಪೇ ಸೇವೆಗೆ ಚಾಲನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಪುತ್ತೂರು ತಾಲೂಕು, ಕುಂಬ್ರ ವಲಯದ ಒಳಮೊಗ್ರು CSC ಸೇವಾಕೇಂದ್ರದಲ್ಲಿ ಡಿಜಿ ಪೇ (Digi Pay) ಸೇವೆಯನ್ನು ಕುಂಬ್ರ ವಲಯ ಜನಜಾಗೃತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕೃಷಿ ಅಧಿಕಾರಿ ಹರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮಹತ್ವವನ್ನು ವಿವರಿಸಿದರು. ತಾಲೂಕು ನೋಡಲ್ ಅಧಿಕಾರಿ ಜೀವನ್ ಅವರು ಡಿಜಿ ಪೇ ಸೇವೆಯ ಉಪಯೋಗಗಳು, ಸುರಕ್ಷತೆ ಹಾಗೂ ಸಾರ್ವಜನಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಶಿವರಾಜ್ ಹೆಗ್ಡೆ, ತಾಲೂಕು ರಿಕವರಿ ಮೇಲ್ವಿಚಾರಕಿ ಮೋಹಿನಿ ಎಸ್. ಗೌಡ, ಕುಂಬ್ರ ಹಾಗೂ ಶೇಖಮಲೆ ಕಾರ್ಯಕ್ಷೇತ್ರಗಳ ಪದಾಧಿಕಾರಿಗಳು, ಸದಸ್ಯರು, VLEಗಳು, ಸುವಿಧಾ ಸಹಾಯಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಂಬ್ರ ಸೇವಾಪ್ರತಿನಿಧಿ ಶಶಿಕಲಾ ಪಿ. ರೈ ಅವರು ಸ್ವಾಗತಿಸಿದರು. ಶೇಖಮಲೆ ಸೇವಾಪ್ರತಿನಿಧಿ ರೇಖಾ ರೈ ವಂದಿಸಿದರು.

LEAVE A REPLY

Please enter your comment!
Please enter your name here