








ಪುತ್ತೂರು : ಪುತ್ತೂರಿನ ಹೃದಯ ಭಾಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಗಾನಕೋಗಿಲೆ ಎಸ್ ಜಾನಕಿ ಅವರಿಗೆ ನುಡಿನಮನವನ್ನು ಜುಲೈ 13 ರಂದು ಸಲ್ಲಿಸಲಾಯಿತು.



ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್.ಪಿ.ವಿ ಅವರು ಜೀವನದಲ್ಲಿ ಅಮೂಲ್ಯ ನೆನಪಾಗಿ ಉಳಿದಿರುವ ಜಾನಕಿ ಅಮ್ಮನವರ ಸವಿನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ವಿದ್ಯಾರ್ಥಿಗಳು ಹಾಗೂ ಉಪಾನ್ಯಾಸಕ ವೃಂದದವರು 2 ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಎಸ್ ಜಾನಕಿಯವರು ಅವರು ಹಾಡಿದ 25 ಕ್ಕೂ ಹೆಚ್ಚು ಗೀತೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿಸಲಾಯಿತು. ಅರ್ಥಶಾಸ್ತ್ರ ಉಪಾನ್ಯಾಸಕ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.













