ನಿಡ್ಪಳ್ಳಿ: ಸಾಮೂಹಿಕ ತ್ರಿಕಾಲ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ಟ್ರಸ್ಟ್ (ರಿ) ನಿಡ್ಪಳ್ಳಿ, ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿ ಆ.7ರಂದು ನಡೆಯಲಿರುವ ಸಾಮೂಹಿಕ ತ್ರಿಕಾಲ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜು.13 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೂ, ಪುತ್ತೂರು ಯಮುನಾ ಬೋರ್ ವೆಲ್ಸ್ ನ ಮಾಲಕರೂ ಆಗಿರುವ ದಿವ್ಯಾ ಕೆ.ಶೆಟ್ಟಿ ಇವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವಸ್ಥಾನದ ಅರ್ಚಕರಾದ ನವೀನ್ ಹೆಬ್ಬಾರ್, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ರೈ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ನಾಗೇಶ ಗೌಡ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here