ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ವಿದ್ಯಾರ್ಥಿ ಸರ್ಕಾರದ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ

0

ಪುತ್ತೂರು :ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜು.12,13ರಂದು ನಡೆಸಲಾಯಿತು.

ಶಾಲಾ ನಾಯಕನಾಗಿ 10ನೇ ತರಗತಿಯ ಯತನ್ ಆಯ್ಕೆಯಾದರು. ಉಪನಾಯಕನಾಗಿ ಧನುಷ್ , ವಿರೋಧ ಪಕ್ಷದ ನಾಯಕಿಯಾಗಿ ಕೃತಿಕಾ, ವಿರೋಧ ಪಕ್ಷದ ಉಪನಾಯಕಿಯಾಗಿ ಬೀಬಿ ಆಸಿಯ, ಕ್ರೀಡಾ ಮಂತ್ರಿ ಅಬ್ದುಲ್ ರಹೀಂ, ಉಪಕ್ರೀಡಾ ಮಂತ್ರಿ ಮಿಥುನ್ ಕುಮಾರ್, ವಿದ್ಯಾ ಮಂತ್ರಿ ಲತೀಕ್ಷಾ, ಉಪವಿದ್ಯಾಮಂತ್ರಿ ನುಹಾ ಫಾತಿಮ, ರಕ್ಷಣಾ ಮಂತ್ರಿ ಆಕಾಶ್, ಉಪರಕ್ಷಣಾ ವಾಸಿಲ್ ಮುಬಾರಕ್, ಸ್ತ್ರೀಹಿತ ರಕ್ಷಣಾ ಮಂತ್ರಿ ಶ್ರಾವ್ಯ ಬಿ, ಉಪಸ್ತ್ರೀಹಿತ ರಕ್ಷಣಾ ಮಂತ್ರಿ ಅರ್ಪಿತ ಕೆ. ನೀರಾವರಿಮಂತ್ರಿ ಹರ್ಷದೀಪ್, ಉಪನೀರಾವರಿ ಮಂತ್ರಿ ಕಾರ್ತಿಕ್. ಕೃಷಿ ಮಂತ್ರಿ ಮನೀಶ್ ಬಿ, ಉಪಕೃಷಿ ಮಂತ್ರಿ ಜೀವನ್ ಕುಮಾರ್, ಆರೋಗ್ಯ ಮಂತ್ರಿ ಯಶ್ವಿನಿ, ಉಪ ಆರೋಗ್ಯ ಮಂತ್ರಿ ಫಾತಿಮತ್ ತೌಸೀಫ, ಸಂಸತ್ ಕಾರ್ಯದರ್ಶಿ ಶ್ರೀಜಾ ಕೆ, ಉಪ ಸಂಸತ್ ಕಾರ್ಯದರ್ಶಿ ತನುಶ್ರೀ ಕೆ, ಉಪಸಭಾಪತಿ ದೀಶಾ, ಸ್ಚಚ್ಚತಾ ಮಂತ್ರಿ ತೃಪ್ತಿ, ಉಪ ಸ್ಚಚ್ಚತಾ ಮಂತ್ರಿ ಫಾತಿಮತ್ ಕೈರುನ್ನೀಸಾ, ಸಾಂಸ್ಕೃತಿಕ ಮಂತ್ರಿ ಫಾತಿಮತ್ ಮೆಹರೂಫ, ಉಪಸಾಂಸ್ಕೃತಿಕ ಆಯಿಷತ್ ಸಫಾ ಆಯ್ಕೆಯಾದರು.

ಸಂಸತ್ತಿನ ಸಭಾಪತಿಯಾಗಿ ಆಯ್ಕೆಗೊಂಡ ಧನ್ವಿ ಆಯ್ಕೆಗೊಂಡ ಮಂತ್ರಿಗಳಿಗೆ ಪ್ರಮಾಣ ವಚನ ಭೋಧಿಸಿದರು.ಮುಖ್ಯಗುರು ಪುಷ್ಪಾವತಿ ಎಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. 

ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ತಮ್ಮ ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡುವುದರ ಜೊತೆ ಶುಭಹಾರೈಸಿದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇಂಗ್ಲಿಷ್ ಅಧ್ಯಾಪಕ ರಾಧಾಕೃಷ್ಣ ಕೋಡಿ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ಶುಭಹಾರೈಸಿದರು. ಸಂಸತ್ತಿನ ನಿಯಮಾವಳಿಗಳನ್ನು ಸಹ ಶಿಕ್ಷಕಿ ಸುಮಂಗಲಾ.ಕೆ ತಿಳಿಸಿದರು. ವೇದಿಕೆಯಲ್ಲಿ ಸಹಶಿಕ್ಷಕಿಯರಾದ ಭುವನೇಶ್ವರಿ. ಎಂ ಶೋಭಾ.ಬಿ, ಗೌತಮಿ ಎಂ ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here