ಜು.19: ಶಿವಳ್ಳಿ ಸಂಪದ ವಾರ್ಷಿಕ ಮಹಾಸಭೆ

0

ಪುತ್ತೂರು: ಶಿವಳ್ಳಿ ಸಂಪದ (ರಿ), ಪುತ್ತೂರು ಇದರ ವಾರ್ಷಿಕ ಮಹಾಸಭೆ 19-07-2026ರ ಭಾನುವಾರ ತಾಲೂಕು ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಅವರ ಅಧ್ಯಕ್ಷತೆಯಲ್ಲಿ ಶ್ರೀ ವಿಷ್ಣು ಮಂಟಪ, ಕೆಮ್ಮಾಯಿಯಲ್ಲಿ ನಡೆಯಲಿದೆ.

ಸಭೆಯ ಪ್ರಾರಂಭದಲ್ಲಿ ವೇ.ಮೂ. ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಅವರ ನೇತೃತ್ವದಲ್ಲಿ ಐಕ್ಯ ಮಂತ್ರ ಹೋಮ ಜರುಗಲಿದೆ. ಶಿವಳ್ಳಿ ಸಂಪದ ಮಹಿಳಾ ಘಟಕದ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಶೋಭಾನೆ ಪಠಣ ನಡೆಯಲಿದೆ. ಸಭೆಯಲ್ಲಿ ರಂಗನಾಥ ಉಂಗ್ರುಪುಳಿತ್ತಾಯ ಮತ್ತು ಗೋಪಾಲಕೃಷ್ಣ ಕುಂಜತ್ತಾಯ ಅವರಿಗೆ ಶಿವಳ್ಳಿ ವಿಭೂಷಣ ಪ್ರಶಸ್ತಿ ಹಾಗೂ ಶಿವಪ್ರಸಾದ್ ಇಜ್ಜಾವು ಅವರಿಗೆ ಶಿವಳ್ಳಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೊಳತ್ತಾಯ ಸಹೋದರ ಪ್ರಾಯೋಜಕತ್ವದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಅವಿನಾಶ್ ಕೊಡಂಕಿರಿ ಮತ್ತು ಪ್ರಕಾಶ ಉಂಗ್ರುಪುಳಿತ್ತಾಯ ಅವರಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ವೇ.ಮೂ. ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಅವರಿಂದ ಉಪನ್ಯಾಸ ನಡೆಯಲಿದೆ. ಬಳಿಕ ಮಹಾಸಭೆ ಜರುಗಲಿದ್ದು, ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇರುತ್ತದೆ. ಈ ಮಹಾಸಭೆಯಲ್ಲಿ ಶಿವಳ್ಳಿ ಸಮಾಜದ ಎಲ್ಲಾ ಬಂಧುಗಳು ಭಾಗವಹಿಸಬೇಕೆಂದು ಶಿವಳ್ಳಿ ಸಂಪದ (ರಿ), ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here