







ಕಾಣಿಯೂರು: ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ದಶಮ ವರ್ಷದ ದಶಸಂಭ್ರಮ ಅಂಗವಾಗಿ ಭಾನುವಾರ ಕೊಡಿಯಾಲದಿಂದ ಕಾಣಿಯೂರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.



ಕಾರ್ಯಕ್ರಮದಲ್ಲಿ ರಸ್ತೆ ಬದಿಯಲ್ಲಿದ್ದ ಹುಲ್ಲು-ಗಿಡಗಳನ್ನು ತೆರವುಗೊಳಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಹಾಗೂ ವಿದ್ಯುತ್ ತಂತಿಗಳಿಗೆ ತಾಗುವ ಮರಗಳ ಕೊಂಬೆಗಳನ್ನು ಕತ್ತರಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಶ್ರಮದಾನ ಕಾರ್ಯಕ್ರಮವು ಬಳಗದ ಅಧ್ಯಕ್ಷ ಸುರೇಶ್ ಗುತ್ತು, ಬೆಳ್ಳಾರೆ ಮೆಸ್ಕಾಂ ಅಧಿಕಾರಿ ವಸಂತ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷನ್ ಕೆ ಗುತ್ತು ಅವರ ನೇತೃತ್ವದಲ್ಲಿ ನಡೆಯಿತು.



ಶ್ರಮದಾನದಲ್ಲಿ ಬಳಗದ ಸದಸ್ಯರು, ಊರಿನವರರು,ಗ್ರಾಮಸ್ಥರು ಹಾಗೂ ಮೆಸ್ಕಾಂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.ಈ ಶ್ರಮದಾನ ಕಾರ್ಯಕ್ರಮದಲ್ಲಿ ಕೇಶವ ಕೆ.ಪಿ. ಕಲ್ಪಡ ತೋಟ, ಬಾಲಕೃಷ್ಣ ಕೆ., ಲೋಕೇಶ್ ಕೆ.ವಿ., ಯುವರಾಜ್ ಕೆ., ಪ್ರಸಾದ್ ಕೆ., ಗಣೇಶ್, ಸುಜಿತ್, ತಾರಾನಾಥ ಗುತ್ತು, ಆನಂದ ಗೌಡ, ವಿಠಲ ಗೌಡ, ಲೋಕೇಶ್ ತಾಳಿತ್ತಾಡಿ, ರಂಜನ್, ತಿಮ್ಮಪ್ಪ, ಹರೀಶ್, ರಾಜೇಶ್ ಕಣಿಲೆಗುಂಡಿ, ಪದ್ಮನಾಭ ಗುತ್ತು,ಚೇತನ್, ಹರ್ಷಿತ್, ನವೀನ್, ರಮೇಶ್, ಧರ್ಮಪಾಲ, ಜಯಂತ ಗುತ್ತು, ದೀಕ್ಷಿತ್ ಪೋಲಜೆ, ಚೇತನ್ ಪೋಲಜೆ, ಲಿಂಗಪ್ಪ ಗೌಡ, ಜಗದೀಶ್, ಜೀವನ್, ಹೊನ್ನಪ್ಪ ಗೌಡ, ನಿತಿನ್ ಕೆ.ವಿ., ಪ್ರೀತೇಶ್, ಗಿರೀಶ್, ರೋಷನ್, ಪವನ್ ಕಲ್ಪಡ, ಮಹೇಶ್ ಕಲ್ಪಡ,ಚಂದ್ರಶೇಖರ, ಚೇತನ್ ಗುತ್ತು, ದೀಕ್ಷಿತ್ ಗುತ್ತು, ಸುಂದರ ಪೋಲಜೆ, ಕುಶಾಲಪ್ಪ ಪೋಲಜೆ, ಹಾರೀಶ್ ಮೂವಪ್ಪೆ, ಪುಷ್ಪಕ್, ಶೇಷಪ್ಪ ಗುತ್ತು, ಕೊರಗಪ್ಪ ಪುರ್ಲಡಿ,ಶೀನಪ್ಪ ಪೋಟ್ರೆ, ರೇವಂತ್, ಶ್ರೀಧರ ಗೌಡ, ಮೋಹಿನಿ ಕಲ್ಪಡ, ಹರಿಣಿ, ರಜನಿ, ಸರೋಜ ಗುತ್ತು, ಭವಾನಿ ಗುತ್ತು, ಶೋಭಾ ಗುತ್ತು ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ಮೆಸ್ಕಾಂ ಸಿಬ್ಬಂದಿ ಭಾಗವಹಿಸಿದ್ದರು.
ದಶಸಂಭ್ರಮದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಸ್ನೇಹಿತರ ಬಳಗದ ಈ ಶ್ರಮದಾನ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.










