ಬಡಗನ್ನೂರು ಗ್ರಾ. ಪಂ ಗ್ರಾಮಸಭೆ

0

ಬಡಗನ್ನೂರು: ಇಲಾಖಾಧಿಕಾರಿಗಳ ಗೖೆರು ಗ್ರಾಮಸ್ಥರು ಸಭೆಯಲ್ಲಿ ತರಾಟೆ ನಡೆದ ಘಟನೆ ಬಡಗನ್ನೂರು ಗ್ರಾಮ ಸಭೆಯಲ್ಲಿ ನಡೆಯಿತು.ಸಭೆಯು ಆಡಳಿತಾಧಿಕಾರಿ ರಘುರವರ ಅಧ್ಯಕ್ಷತೆಯಲ್ಲಿ ಜು.20 ರಂದು ನಡೆಯಿತು.

ಸುಮಾರು 20, 21 ಇಲಾಖೆಗಳು ಇದ್ದರೂ ಗ್ರಾಮ ಸಭೆಗೆ 5,6 ಇಲಾಖಾಧಿಕಾರಿಗಳು ಭಾಗವಹಿಸಿರುವುದು ದುರದೃಷ್ಟಕರವಾಗಿದೆ. ಗ್ರಾಮದಲ್ಲಿ ಹೆಚ್ಚಿನವರು ಕೃಷಿಕರು ಇದ್ದಾರೆ. ಕೃಷಿ, ತೋಟಗಾರಿಕೆ, ಕಂದಾಯ, ಇಲಾಖಾ  ಅಧಿಕಾರಿಗಳ ಮಾಹಿತಿ ಅಗತ್ಯವಾಗಿ ದೊರೆಯಬೇಕಾಗಿದೆ. ಮಳೆಗಾಲ ಸಂದರ್ಭದಲ್ಲಿ ಲೋಕೋಪಯೋಗಿ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಮಾಡದೆ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆ ಬದಿ ಹೊಂಡ ಬಿದ್ದು ವಾಹನ ಸಂಚಾರ ಕಷ್ಟಕರವಾಗಿದೆ. ಈ ಬಗ್ಗೆ ಸಾರ್ವಜನಿಕರಾದ ನಾವು ಯಾರನ್ನು ಪ್ರಶ್ನಿಸಬೇಕು ಎಂದು ಗ್ರಾಮಸ್ಥ  ಸಂತೋಷ್ ಆಳ್ವ ಗಿರಿಮನೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಆಡಳಿತಾಧಿಕಾರಿ ರಘು ಉತ್ತರಿಸಿ  ಇಲಾಧಿಕಾರಿಗಳಿಗೆ ಒಬ್ಬರಿಗೆ ಎರಡು ಮೂರು ಕಡೆ ವಿವಿಧ ಇಲಾಖೆಗಳ ಜವಾಬ್ದಾರಿ ಹಂಚಲಾಗಿದೆ. ಇದರಿಂದ ಕೆಲಸದ ಒತ್ತಡದಲ್ಲಿ ಸಭೆಗೆ ಬರಲು ಸಾಧ್ಯವಾಗದಿರಬಹುದು. ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಳಿಸಿಕೊಡುವ ಎಂದು ಹೇಳಿದರು. ಇವರೊಂದಿಗೆ ಧ್ವನಿಗೂಡಿಸಿದ ಅಭಿವೃದ್ಧಿ ಅಧಿಕಾರಿ ವೀಣಾ ಮಳೆಗಾಲದ  ಸಣ್ಣ ಪುಟ್ಟ ಸಮಸ್ಯೆ  ತುರ್ತು ಕಾಮಗಾರಿಗಳನ್ನು ಪರಿಶೀಲಸಿ ಪಂಚಾಯತ್ ವತಿಯಿಂದ  ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸೋಣ ಎಂದು ಉತ್ತರಿಸಿದರು.

ಪುತ್ತೂರು – ಕಾಸರಗೋಡು ಕೆ. ಎಸ್ ಆರ್. ಟಿ. ಸಿ ಬಸ್  ಪುನಃ ಆರಂಭಿಸುವಂತೆ ಸಾರ್ವಜನಿಕರ ಒತ್ತಾಯ :
ಪುತ್ತೂರಿನಿಂದ  – ಕಾಸರಗೋಡು ವರೆಗೆ  ಕೆಲವು ವರ್ಷದ ಹಿಂದೆ  ಕೆ. ಎಸ್ ಆರ್. ಟಿ. ಸಿ ಬಸ್  ಸಂಚಾರ ವ್ಯವಸ್ಥೆ ಇತ್ತು. ಬಳಿಕ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತು. ಕೇರಳ ಕರ್ನಾಟಕ ಗಡಿ ಭಾಗವಾದ ಈ ಪ್ರದೇಶದಲ್ಲಿ ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಇತರ ವಿಚಾರಗಳಿಗೆ ಸಂಪರ್ಕಮಾಡಲು ಇದು ಸಹಕಾರಿಯಾಗಿದ್ದು ಮತ್ತೆ ಪುನಃ ಆರಂಭ ಮಾಡುವಂತೆ  ಗ್ರಾಮಸ್ಥೆ  ಶಿಕ್ಷಕಿ ಅರುಣಾ ಕೆ. ಸಿ ಒತ್ತಾಯಿಸಿದರು. ಈ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಪತ್ರ ಬರೆದುಕೊಳ್ಳಲು ನಿರ್ಣಯಿಸಲಾಯಿತು..

ಸೇತುವೆ ಅಭಿವೃದ್ಧಿ ಪಡಿಸಿ 
ಸುಳ್ಯಪದವು – ಮುಳ್ಳೇರಿಯಾ ಸಂಪರ್ಕ ರಸ್ತೆಯ ಕಾಯರ್ಪದವು ಕರ್ನಾಟಕ  ಕೇರಳ ಗಡಿಪ್ರದೇಶದಲ್ಲಿ ಅಪಾಯಕಾರಿ ಸೇತುವೆ  ಇದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮುಂದೆ ಇದರಿಂದ ಅನಾಹುತಪೂ ಸಂಭವಿಸಬಹುದಾದ ಸಾಧ್ಯತೆ ಇದೆ ಆದರಿಂದ ಸೇತುವೆಯನ್ನು ಅಭಿವೃದ್ಧಿ ಪಡಿಸಿ ಸಂಚಾರಕ್ಕೆ ಸುಗಮಗೊಳಿಸುವಂತೆ  ಅರುಣಾ ಕೆ. ಸಿ ಮನವಿ ಮಾಡಿದರು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ತಿರ್ಮಾನಿಸಲಾಯಿತು.

ಅಪಾಯಕಾರಿ ಮರ ತೆರವುಗೊಳಿಸಿ- ರವಿರಾಜ ರೖೆ ಸಜಂಕಾಡಿ
ಅರಣ್ಯ ಇಲಾಖಾ ಮಾಹಿತಿ ಸಂದಭದಲ್ಲಿ ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಪಟ್ಟಿ ನೀಡಲಾಗಿದೆ ಅವುಗಳನ್ನು ತೆರವು ಗೊಳಿಸುವಂತೆ ತಿಳಿಸಿದರು. ಈ ಬಗ್ಗೆ ಪಾಣಾಜೆ ವಲಯ ವಲಯಾರಣ್ಯಾಧಿಕಾರಿ ಮದನ್ ಉತ್ತರಿಸಿ ಸರಕಾರಿ ಜಾಗದಲ್ಲಿರುವ ಮರಗಳನ್ನು ಈಗಾಗಲೇ ಪರಿಶೀಲನೆ ಮಾಡಿ ತೆರವು ಮಾಡಲಾಗಿದೆ ಬಿಟ್ಟು ಹೋದಲ್ಲಿ ಪಟ್ಟಿಮಾಡಿ ಕೊಡಿ ಪರಿಶೀಲನೆ ಮಾಡಿ ತೆರವು ಮಾಡುತ್ತೇವೆ. ಖಾಸಗಿ ಜಾಗದಲ್ಲಿ ಇದ್ದಲ್ಲಿ ನಾವು ಕಡಿಯಲ್ಲ ಜಾಗದ ಮಾಲಿಕರು ತೆರವು ಮಾಡಬೇಕು ನಾವು ಅನುಮತಿ ನೀಡುತ್ತವೆ ಎಂದು ಹೇಳಿದರು.

ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಕಾರ್ಯಕರ್ತೆ ಲಕ್ಷ್ಮೀ 14 ಹರೆಯದ ಹಣ್ಣು ಮಕ್ಕಳಿಗೆ ನೀಡುವ ಗರ್ಭ ಕಂಟಕ ಕ್ಯಾನ್ಸರ್ ನಿರ್ಮೂಲನೆ ನೀಡುವ ಲಸಿಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿ,  14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಪೋಷಕರು ಉತ್ತೇಜನ ನೀಡಬೇಕು. ಈಗಾಗಲೇ ಅನೇಕರಿಗೆ ನೀಡಲಾಗಿದೆ ಇನ್ನೂ ಅನೇಕರು ಬಾಕಿ ಇದ್ದರೆ ಕೆಲವರಲ್ಲಿ ನಕಾರಾತ್ಮಕ ಚಿಂತನೆ ಇದೆ. ಅದನ್ನು ತೊಡೆದುಹಾಕಿ ಸಕಾರಾತ್ಮಕ ಗೊಳಿಸಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿ ಮಳೆಗಾಲದಲ್ಲಿ  ಹರಡಬಹುದಾದ ಸಾಂಕ್ರಮಿಕ ರೋಗಗಳ ನಿರ್ಮೂಲನೆ ಮತ್ತು  ಇಲಾಖೆಯಿಂದ ಸಿಗುವ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.ಮೆಸ್ಕಾಂ,ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಇಲಾಖೆ ,ಆರೋಗ್ಯ, ಅರಣ್ಯ ಇಲಾಖಾಧಿಕಾರಿಗಳು ಭಾಗವಹಿಸಿ ಇಲಾಖಾ ಮಾಹಿತಿ ನೀಡಿದರು. 

ಮಾರ್ಗದರ್ಶಿ ಅಧಿಕಾರಿಯಾಗಿ ಪುತ್ತೂರು ಪಂ.ರಾಜ್ ಇಂಜಿನಿಯರ್ ಇಲಾಖಾ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕುಶಾಲ್ ಮಾತನಾಡಿ, ಗ್ರಾಮದ ಅಭಿವೃದ್ಧಿ ದೃಷ್ಟಿಯಲ್ಲಿ ಚರ್ಚೆಗಳು ನಡೆದಿದೆ ಕೊಳ್ತಿಗೆಯಲ್ಲಿ ದೊಡ್ಡ ಗಾತ್ರದ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿದೆ ತಮ್ಮ ಗ್ರಾಮದ ಘಟಕದಲ್ಲಿ ಕಸ ಜಾಸ್ತಿಯಾದಲ್ಲಿ  ಕೊಳ್ತಿಗೆ ಘಟಕಕ್ಕೆ ರವಾನಿಸಬಹುದು ಎಂದು ಹೇಳಿದರು.

ಸಭೆಯಲ್ಲಿ ಪಂಚಾಯತ್ ನಿಕಟಪೂರ್ವ ಸದಸ್ಯರು, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಅಭಿವೃದ್ಧಿ ಅಧಿಕಾರಿ ವೀಣಾ ಸ್ವಾಗತಿಸಿ, ವರದಿ ವಾಚಿಸಿದರು.ಆಡಳಿತಾಧಿಕಾರಿ ರಘು ವಂದಿಸಿದರು. ಪಂ ಸಿಬ್ಬಂದಿಗಳು ಸಹಕರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಕಾಲಿಕವಾಗಿ ನಿಧನ ಹೊಂದಿದ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಡಗನ್ನೂರು ಉಪ ಆರೋಗ್ಯ ಕೇಂದ್ರ ಸಿ. ಹೆಚ್. ಓ ಪ್ರಜ್ಞಾ ಮಿತ್ತಡ್ಕ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

2025-26 ಸಾಲಿನಲ್ಲಿ ತೆರಿಗೆ ಪಾವತಿಯಲ್ಲಿ ಶೇ ನೂರು ಪಾವತಿಯಾದ ಬಗ್ಗೆ ಅಭಿನಂದನೆ ಸಲ್ಲಿಸಿ 26-27 ಸಾಲಿನಲ್ಲಿ ಶೇ ನೂರು ಪಾವತಿಗೊಳಿಸಿ  ಗ್ರಾಮದ ಅಭಿವೃದ್ಧಿಗೆ  ಸಹಕರಿಸಬೇಕು,ಹಾಗೂ  ವ್ಯಾಪಾರ ಪರವಾನಿಗೆ ನವೀಕರಿಸದೆ ಇದ್ದವರು ಪರವಾನಿಗೆ ನವೀಕರಿಸಿಕೊಳ್ಳಬೇಕು ಇಲ್ಲದ ಪಕ್ಷದಲ್ಲಿ ಪರವಾನಿಗೆ ರದ್ದು 
ರಘು
ಆಡಳಿತಾಧಿಕಾರಿಗಳು

ಕಸ ಹೊತ್ತಿಸಿದಲ್ಲಿ ದಂಡ
ಅಂಗಡಿ ಮಾಲಿಕರು ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಕಡ್ಡಾಯವಾಗಿ ಸಂಜೀವಿನಿ ಒಕ್ಕೂಟ ಸದಸ್ಯರು ತಮ್ಮ ಬಳಿ  ಬರುವಾಗ  ನೀಡಿ  ಸಹಕರಿಸಬೇಕು. ಕಸ ನೀಡದೆ  ಹೊತ್ತಿಸಿದಲ್ಲಿ ದಂಡ ವಿದಿಸಲಾಗುವುದು.
ವೀಣಾ 
ಅಭಿವೃದ್ಧಿ ಅಧಿಕಾರಿ

LEAVE A REPLY

Please enter your comment!
Please enter your name here