ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ವಾರ್ಷಿಕ ಮಹಾಸಭೆ : ರೂ.19.35 ಲಕ್ಷ ನಿವ್ವಳ ಲಾಭ | ಶೇ.12 ಡಿವಿಡೆಂಡ್ 

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.26ರಂದು ಅಪರಾಹ್ನ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಇ.ನಾರಾಯಣ ಹೇರಳೆ ರವರ ಅಧ್ಯಕ್ಷತೆಯಲ್ಲಿ ಜರಗಿತು. 

ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸ್ವಾಗತಿಸಿ ಮಾತನಾಡಿ, ಸಂಘವು ವರದಿ ವರ್ಷದಲ್ಲಿ ರೂ.20,34,63,299.44 ವಹಿವಾಟು ಮಾಡಿರುತ್ತದೆ. ಹಾಗೆಯೇ ರೂ.19,35,306 ನಿವ್ವಳ ಲಾಭವನ್ನು ಹೊಂದಿದ್ದು ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳರವರು ಸಭೆಯ ನೋಟಿಸನ್ನು ಮತ್ತು ಹಿಂದಿನ ಸಭೆಯ ನಡಾವಳಿಯನ್ನು ಓದಿ, ಲೆಕ್ಕಪರಿಶೋಧಕರ ವರದಿಯಲ್ಲಿ ನಮೂದಿಸಿದ ನ್ಯೂನತೆಗಳನ್ನು ಮತ್ತು ಅನುಪಾಲನಾ ವರದಿಯನ್ನು ಸಭೆಗೆ ತಿಳಿಸಿ, 2024-25ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು ಅಲ್ಲದೆ 2024-25ನೇ ಸಾಲಿನ ಆಡಳಿತ ಮಂಡಳಿ ವರದಿ ಮತ್ತು ಅಂಕಿ-ಅಂಶಗಳನ್ನು ಸಭೆಗೆ ತಿಳಿಸಿದರು. 

ಸಂಘದ ನಿರ್ದೇಶಕರಾದ ಇ.ಗೋಪಾಲಕೃಷ್ಣ ಹೇರಳೆ, ವಿ.ರಾಮಚಂದ್ರ ರಾವ್, ಯಂ.ವೆಂಕಟೇಶ, ಡಿ.ಶಿವಪ್ರಸಾದ, ಬಿ.ಸದಾಶಿವ ಹೊಳ್ಳ, ಲಕ್ಷ್ಮೀ ಐ, ಸುಧಾ ಎನ್.ರಾವ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಎ ವಂದಿಸಿದರು. ಗೀತಾ ಎಸ್.ಹೊಳ್ಳ, ಪದ್ಮಾಕ್ಷಿ, ಸಂಧ್ಯಾಕಾರಂತ ಪ್ರಾರ್ಥಿಸಿದರು. ಆಶಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here