16ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ಪುತ್ತೂರು ಮೊಸರು ಕುಡಿಕೆ ಉತ್ಸವ ನಡೆಯುತ್ತಿದ್ದು, ಈ ಬಾರಿ 16ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಆ.2ರಂದು ಮಹತೋಭಾರ ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಾರ್ಥಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ನೆರವೇರಿಸಿದರು. ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ ಅಧ್ಯಕ್ಷ ವಿನಯಕುಮಾರ್ ಕಡಮಜಲು ಅವರು ಪುತ್ತೂರು ಮೊಸರು ಕುಡಿಕೆ ಉತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.

16ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸಮಿತಿಯ ಸಂಚಾಲಕ ಕಿರಣ್ ಕುಮಾರ್ ರೈ ಕಬ್ಬಿನಹಿತ್ಲು, ಸಹ ಸಂಚಾಲಕ ಲಕ್ಷ್ಮಣ್ ಬೈಲಾಡಿ, ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಪಾಲಾರ್, ಸುರೇಶ್ ರೈ, ಸಮಿತಿಯ ಕಾರ್ಯದರ್ಶಿ ಸೇಶಪ್ಪ ಬೆಳ್ಳಿಪ್ಪಾಡಿ, ಕೋಶಾಧಿಕಾರಿಯಾಗಿ ಜಿತೇಶ್ ಬಲ್ನಾಡ್, ಸಹ ಕಾರ್ಯದರ್ಶಿಗಳಾದ ಚೇತನ್ ಬೊಳುವಾರು, ಹರಿಣಿ ಪುತ್ತೂರಾಯ ಮತ್ತು ಸಹ ಕೋಶಾಧಿಕಾರಿ ಜೀವನ್ ಬಲ್ನಾಡ್, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಬಿ.ಎಸ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಮಾಣಿ, ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಪ್ರವೀಣ್ ಕಲ್ಲೇಗ, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ್, ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ನಗರ ಉಪಾಧ್ಯಕ್ಷ ಸಂತೋಷ್, ನಗರ ಸಹ ಕಾರ್ಯದರ್ಶಿ ಜಯಂತ್ ಕರ್ಕುಂಜ, ಸೇವಾ ಪ್ರಮುಖ್ ಹರೀಶ್ ದೊಳ್ಪಾಡಿ, ನಗರ ಸಂಯೋಜಕ್ ಜಯಂತ್ ಕುಂಜೂರುಪಂಜ, ಪುತ್ತೂರು ಗ್ರಾಮಾಂತರ ಪ್ರಖಂಡದ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ ಮುಕ್ರಂಪಾಡಿ, ಪ್ರಮುಖರಾದ ಸಂಜಯ್ ಬನಾರಿ, ಭಾಮಿ ಜಗದೀಶ್ ಶೆಣೈ, ನಾಗೇಶ್ ನೈತಾಡಿ, ಸುರೇಶ್ ಕಾವು, ಗಣೇಶ್ ಬೆಳ್ಳಿಪ್ಪಾಡಿ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here