ಭಾರೀ ಮಳೆ : ಮಣಿಕ್ಕರ ಶಾಲಾ ಕ್ರೀಡಾಂಗಣದ ಧರೆ ಕುಸಿತ August 2, 2026 0 FacebookTwitterWhatsApp ಪುತ್ತೂರು: ತಾಲೂಕಿನ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಕ್ರೀಡಾಂಗಣದ ಪಕ್ಕದ ಧರೆ ಕುಸಿತವಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದಿಂದ ಬರುವ ನೀರಿನ ಹರಿವು ಹೆಚ್ಚಳವಾದ್ದರಿಂದ ಮಣ್ಣು ಸಡಿಲಗೊಂಡು ಧರೆ ಕುಸಿತಗೊಂಡಿದೆ.