






ಪುತ್ತೂರು: ಆ.7ರಂದು ಪುತ್ತೂರಿನಲ್ಲಿ ನಡೆಯುವ ತಿರಂಗಾ ಯಾತ್ರೆಯ ಅಂಗವಾಗಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಶಕ್ತಿ ಕೇಂದ್ರ ಬೂತ್ಗಳಲ್ಲಿ, ನೆಕ್ಕಿಲಾಡಿ ಶಕ್ತಿ ಕೇಂದ್ರದ ಪೂರ್ವಭಾವಿ ಸಭೆ ಗುರು ರಾಘವೇಂದ್ರ ಮಠದಲ್ಲಿ ನಡೆಯಿತು.



ಮಾಜಿ ಶಾಸಕ ಸಂಜೀವ ಮಠಂದೂರು, ಮಂಡಲ ಉಪಾಧ್ಯಕ್ಷರು ಹಾಗೂ ಉಪ್ಪಿನಂಗಡಿ ಪ್ರಭಾರಿ ಹರಿಪ್ರಸಾದ್ ಯಾದವ್, ಮಹಾಶಕ್ತಿ ಅಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಮೋಹನ್ ಪಕ್ಕಳ, ಒ.ಬಿ.ಸಿ ಮೋರ್ಚಾ ಮಂಡಲ ಅಧ್ಯಕ್ಷ ರಾಮಚಂದ್ರ ಪೂಜಾರಿ, ಉಷಾ ಮುಳಿಯ, ಶಕ್ತಿ ಕೇಂದ್ರ ಸಂಚಾಲಕರು ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.













