ಅಕ್ಷರ ಕೋಚಿಂಗ್ ಸೆಂಟರ್ ಪುತ್ತೂರಿಗೆ ಎಂಟ್ರಿ : ನಾಲ್ಕನೇ ಶಾಖೆ ತೆಂಕಿಲದಲ್ಲಿ ಶುಭಾರಂಭ, ದಾಖಲಾತಿ ಆರಂಭ

0

ಪುತ್ತೂರು: ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ ಮೂರು ಶಾಖೆಗಳ ಮೂಲಕ ಶಿಕ್ಷಣ ಸೇವೆ ನೀಡುತ್ತಿರುವ ಅಕ್ಷರ ಕೋಚಿಂಗ್ ಸೆಂಟರ್, ಇದೀಗ ಪ್ರಮುಖ ಶಿಕ್ಷಣ ಕೇಂದ್ರವಾದ ಪುತ್ತೂರಿನಲ್ಲಿ ತನ್ನ ನಾಲ್ಕನೇ ಶಾಖೆಯನ್ನು ಆರಂಭಿಸಿದೆ. ತೆಂಕಿಲದ ಪುಷ್ಪಾ ಸ್ಕ್ವೇರ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನೂತನ ಶಾಖೆಯು ಆ.3ರಂದು ಶುಭಾರಂಭಗೊಂಡಿದೆ.


ಕಳೆದ ಐದು ವರ್ಷಗಳಿಂದ ಶಿಕ್ಷಣ ತರಬೇತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷರ ಕೋಚಿಂಗ್ ಸೆಂಟರ್, ಕಲ್ಲಡ್ಕದಲ್ಲಿ ತನ್ನ ಮೊದಲ ಶಾಖೆಯನ್ನು ಆರಂಭಿಸಿ, ಬಳಿಕ ವಿಟ್ಲ ಹಾಗೂ ಕುಕ್ಕಾಜೆಗೆ ವಿಸ್ತರಿಸಿತ್ತು. ಇದೀಗ ಪುತ್ತೂರಿನಲ್ಲಿ ಹೊಸ ಶಾಖೆ ಆರಂಭಿಸುವ ಮೂಲಕ ತನ್ನ ಶಿಕ್ಷಣ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಸಂಸ್ಥೆಯಲ್ಲಿ ಡ್ರಾಯಿಂಗ್ ತರಗತಿಗಳಿಂದ ಆರಂಭಿಸಿ, ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿಜ್ಞಾನ ವಿಷಯ, ಕೆಸೆಟ್, ಜೆಇಇ ಹಾಗೂ ನೀಟ್ ಪ್ರವೇಶ ಪರೀಕ್ಷೆಗಳ ಕೋಚಿಂಗ್‌ಗಳನ್ನು ಅನುಭವಿ ಶಿಕ್ಷಕರಿಂದ ನೀಡಲಾಗುತ್ತಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಸೀಮಿತ ಸಂಖ್ಯೆಯ ಆಸನಗಳು ಮಾತ್ರ ಲಭ್ಯವಿವೆ. ತಮ್ಮ ಮಕ್ಕಳನ್ನು ಕೋಚಿಂಗ್‌ಗೆ ಸೇರಿಸಲು ಇಚ್ಛಿಸುತ್ತಿರುವ ಪೋಷಕರು 9731810772 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕ ಅಭಿಲಾಷ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐದು ವರ್ಷಗಳಿಂದ ಅಕ್ಷರ ಕೋಚಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷವೂ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ. ಅನುಭವಿ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕೋಚಿಂಗ್ ಬ್ಯಾಚ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇದಕ್ಕೆ ಫಲಿತಾಂಶವೇ ಸಾಕ್ಷಿಯಾಗಿದೆ. ಕೆಸೆಟ್, ಜೆಇಇ, ನೀಟ್ ಕೋಚಿಂಗ್‌ಗಳನ್ನೂ ನೀಡಲಾಗುತ್ತಿದೆ.
-ಅಭಿಲಾಷ್ ಆಳ್ವಾ, ಮಾಲಕರು, ಅಕ್ಷರ ಕೋಚಿಂಗ್ ಸೆಂಟರ್

LEAVE A REPLY

Please enter your comment!
Please enter your name here