ಆ.9: ಜಿ.ಎಲ್.ವನ್ ಮಾಲ್’ನಲ್ಲಿ ಪುತ್ತೂರು ತುಳುಕೂಟದಿಂದ ಪಿರಾಕ್’ದ ಆಟಿದ ನೆಂಪು ಮತ್ತು ತುಳು ಕವಿಗೋಷ್ಠಿ

0

ಪುತ್ತೂರು: ಪುತ್ತೂರು ತುಳುಕೂಟದಿಂದ ಆಗಸ್ಟ್ 9ರಂದು ಬೆಳಗ್ಗೆ ಜಿ.ಎಲ್.ವನ್ ಮಾಲ್’ನಲ್ಲಿ ಗತಕಾಲದ ತುಳುವರ ಆಟಿ ತಿಂಗಳನ್ನು ನೆನಪಿಸುವ “ಪಿರಾಕ್’ದ ಆಟಿದ ನೆಂಪು” ಕಾರ್ಯಕ್ರಮ ಮತ್ತು ತುಳು ಕವಿಗೋಷ್ಠಿ ನಡೆಯಲಿದೆ.


ಉಪನ್ಯಾಸಕ ಹಾಗೂ ದೈವ ನರ್ತಕರಾಗಿರುವ ಡಾ. ರವೀಶ್ ಪಡುಮಲೆ ಅವರು ಹಿಂದಿನ ಕಾಲದ ಆಟಿ ದಿನಗಳ ನೆನಪು ಮಾಡಲಿದ್ದಾರೆ. ಜಿ. ಎಲ್. ಸಮೂಹ ಸಂಸ್ಥೆಗಳ ಮಾಲಕ ಬಲರಾಮ ಆಚಾರ್ಯ, ರೋಟರಿ ಪುತ್ತೂರು ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಹಾಗೂ ಲಯನ್ಸ್ ಚೆಯರ್ ಪರ್ಸನ್ ವತ್ಸಲಾ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಜತೆಗೆ ಮಳೆಗಾಲ ಹಾಗೂ ಆಟಿಯ ಬಗ್ಗೆ ಕವಿಗೋಷ್ಠಿಯೂ ಜರಗಲಿದ್ದು, ಬಹುಭಾಷಾ ಸಾಹಿತಿ ಹಾಗೂ ತುಳು ಲಿಪಿ ತಜ್ಞರಾದ ಶ್ರೀಶಾವಾಸವಿ ತುಳುನಾಡ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 24 ಕವಿಗಳಿಂದ ಸ್ವರಚಿತ ಕವನ ವಾಚನ ಇರಲಿದ್ದು ಚಿಗುರಲೆ ಸಾಹಿತ್ಯ ಬಳಗದ ಸಂಚಾಲಕ ನಾರಾಯಣ ಕುಂಬ್ರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಆಟಿ ತಿಂಗಳ ವಿಶೇಷ ಖಾದ್ಯಗಳ ಔತಣವೂ ಇರಲಿದ್ದು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದೆಂದು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್ ಹಾಗೂ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here