







ಪುತ್ತೂರು:ಮಿನಿ ವಿಧಾನಸೌಧದ ಬಳಿಯ ಬಪ್ಪಳಿಗೆ-ಬೈಪಾಸ್ ರಸ್ತೆ ಬಳಿಯಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಆಶ್ರಯದಲ್ಲಿ ಆ.28 ರಂದು ಸಂಘದ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 172ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು.
ಜನ್ಮ ದಿನಾಚರಣೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಗುರು ಸಂದೇಶ, ಸನ್ಮಾನ, ಅಭಿನಂದನೆ ಮುಂತಾದ ಕಾರ್ಯಕ್ರಮಗಳು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಪ್ರತಿಭಾ ಪುರಸ್ಕಾರ:
ಎಸೆಸ್ಸೆಲ್ಸಿಯಲ್ಲಿ ಶೇ. 95 ಮತ್ತು ಮೇಲ್ಪಟ್ಟು, ಪಿಯುಸಿ, ಐಟಿಐ,ಡಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಶೇ. 90 ಮತ್ತು ಮೇಲ್ಪಟ್ಟು, ಎಲ್ಲಾ ತರದ ಡಿಗ್ರಿ, ಡಿಪ್ಲೋಮಾ, ಬಿಬಿಎಂ, ಬಿಸಿಎ, ಬಿ.ಎಡ್, ಎಲ್.ಎಲ್.ಬಿ ಇತ್ಯಾದಿ ಕೋರ್ಸಿನ ಎಲ್ಲಾ ಸೆಮಿಸ್ಟರ್ ಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕ್ರೋಡಿಕೃತ 85%ಕ್ಕಿಂತ ಮೇಲ್ಪಟ್ಟು, ಎಲ್ಲಾ ಸ್ನಾತಕೋತ್ತರ, ತಾಂತ್ರಿಕ, ಎಂಸಿಎ, ಎಂಬಿಎ, ಎಂ.ಎಸ್.ಡಬ್ಲ್ಯೂ, ಎಂಎ, ಎಂಕಾಂ, ಎಂ.ಟೆಕ್ ಕೋರ್ಸಿನ ಎಲ್ಲಾ ಸೆಮಿಸ್ಟರ್ ಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕ್ರೋಡಿಕೃತ ಶೇ. 80ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.



ಸನ್ಮಾನ/ಗೌರವಾರ್ಪಣೆ/ಅಭಿನಂದನೆ:
ಈ ಸಂದರ್ಭದಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಕೆಇಎಸ್, ವೈದ್ಯಕೀಯ, ಪಿ.ಎಚ್.ಡಿ, ಸಿಎ ಪದವಿ ಪಡೆದವರಿಗೆ, 2025-2026ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ / ರಾಷ್ಟ್ರ ಪ್ರಶಸ್ತಿ / ರಾಜ್ಯ ಪ್ರಶಸ್ತಿ ಪಡೆದವರಿಗೆ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಹನೀಯರಿಗೆ, 2025-26ರಲ್ಲಿ ಜಿಲ್ಲಾ ಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪುರಸ್ಕಾರ (ಆಯಾ ಕ್ಷೇತ್ರದ ಸಾಧಕರಿಗೆ ಒಮ್ಮೆ ಮಾತ್ರ) ನಡೆಯಲಿದೆ.
ವಿಶೇಷ ಸೂಚನೆ:
2026-27ನೇ ಶೈಕ್ಷಣಿಕ ವರ್ಷದ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಹೊಂದಿರುವರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ಅವರ ಆಧಾರ್ ಪ್ರತಿ, ಅಂಕ ಪಟ್ಟಿ ಹಾಗೂ ಸೂಕ್ತ ದಾಖಲೆಗಳನ್ನು ದಿನಾಂಕ 21-08-2026ರ ಒಳಗೆ ಕಡ್ಡಾಯವಾಗಿ ತಲುಪಿಸುವುದು. 2025-26ನೇ ಶೈಕ್ಷಣಿಕ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅವರ ಆಧಾರ್ ಪ್ರತಿ, ಅಂಕಪಟ್ಟಿಯ ದಾಖಲೆಯನ್ನು ಲಗತ್ತಿಸಿ ದಿನಾಂಕ 21-08-2026ರ ಒಳಗೆ ಅರ್ಜಿಯನ್ನು ನೀಡುವುದು.
ಸನ್ಮಾನ / ಅಭಿನಂದನೆ / ಗೌರವಾರ್ಪಣೆ ಅರ್ಹ ಅಭ್ಯರ್ಥಿಗಳ ಸಾಧನೆಯನ್ನು ವೈಯುಕ್ತಿಕ ವಿವರಗಳೊ೦ದಿಗೆ(Biodata), ದಿನಾಂಕ 17-08-2026ರ ಒಳಗೆ ವಿವರಗಳನ್ನು ನೀಡುವುದು. ನ೦ತರ ಬಂದ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸಲಾಗುವುದಿಲ್ಲ.
ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ / ಅಭಿನಂದನೆ / ಗೌರವಾರ್ಪಣೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಂಘದಿಂದ ನೀಡುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಯಾ ಗ್ರಾಮ ಸಮಿತಿಯ ಅಧ್ಯಕ್ಷರುಗಳ ಮೂಲಕ ನೀಡುವುದು. ಹೆಚ್ಚಿನ ಮಾಹಿತಿಗಾಗಿ 08251-235188, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ (9740899987) ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










