







ಪುತ್ತೂರು: ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಪಾಲಕಿ “ಸಂತ ಫಿಲೋಮಿನಾ”ಳ ಹಬ್ಬವನ್ನು ಆ.೧೧ರಂದು ಆಚರಿಸಲಾಯಿತು.


ಬಲಿಪೂಜೆ:
ಬೆಳಿಗ್ಗೆ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ನಲ್ಲಿರುವ ಚಾಪೆಲ್ನಲ್ಲಿ ದೇವರ ವರ ಕೃಪೆಗಾಗಿ ಕೃತಜ್ಞತಾ ಬಲಿಪೂಜೆ ಅರ್ಪಿಸಲಾಯಿತು. ಶಾಲಾ ಸಂಚಾಲಕರಾದ ವಂ|ಡಾ|ಜೆ.ಬಿ. ಸಲ್ದಾನ್ಹರವರು ದಿವ್ಯ ಬಲಿಪೂಜೆ ನೆರವೇರಿಸಿದರು. ಮರೀಲ್ ಚರ್ಚ್ನ ಧರ್ಮಗುರು ವಂ| ಜಾನ್ ಬಾಪ್ಟಿಸ್ಟ್, ಬನ್ನೂರು ಚರ್ಚ್ನ ಧರ್ಮಗುರು ವಂ|ಬಾಲ್ತಾಜಾರ್ ಪಿಂಟೊ, ಮಾಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ| ವಿವಿಯನ್ ಡಿಸೋಜ, ಸಂತ ಫಿಲೋಮಿನಾ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜರವರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.




ಸಭಾಕಾರ್ಯಕ್ರಮ:
ಬಲಿಪೂಜೆ ನಡೆದ ಬಳಿಕ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿ ಮಿಲನ್ ಮಾತನಾಡಿ ಶಾಲಾ ದಿನಗಳನ್ನು ನೆನಪಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ವಂ|ಡಾ|ಜೆ.ಬಿ. ಸಲ್ದಾನ್ಹರವರು ಮಾತನಾಡಿ ದೇವರಲ್ಲಿ ಅಚಲ ಭಕ್ತಿ, ಸ್ವಚ್ಛಂದ ಮನಸ್ಸು ಸಂತ ಫಿಲೋಮಿನಾ ಅವರದ್ದಾಗಿತ್ತು. ಅದನ್ನು ವಿದ್ಯಾರ್ಥಿಗಳು ಮೈಗೂಡಿಸಬೇಕು ಎಂದು ಹೇಳಿದರು. ಮಾಯ್ ದೆ ದೇವುಸ್ ಚರ್ಚ್ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಲಸ್ರಾದೊ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ, ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಬು ಮರಿಕೆ, ಶಾಲಾ ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ, ವಿದ್ಯಾರ್ಥಿ ನಾಯಕ ಅನ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಫಿಲೋಮಿನಾಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಂತ ಫಿಲೋಮಿನಾಳ ಬಗ್ಗೆ ವಿದ್ಯಾರ್ಥಿನಿ ಸಾಗರಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಮತ್ತು ಇನ್ನಿತರ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ಯಾರ್ಥಿ ಮಿಲನ್ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಸಂಧ್ಯಾ ಸನ್ಮಾನಿತರ ಪರಿಚಯ ಮಾಡಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆರೋನ್ ಡಿಸೋಜ, ಸಜಾ ಮತ್ತು ಅಫ್ರಾ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿ ನಾಯಕ ಅನ್ವಿತ್ ವಂದಿಸಿದರು. ಎಂಟನೇ ತರಗತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಕಾರ್ಮಿನ್ ಪಾಯ್ಸ್ ಮತ್ತು ಮೋಲಿ ತರಬೇತಿ ನೀಡಿದರು. ಶಿಕ್ಷಕ-ಶಿಕ್ಷಕೇತರ ವೃಂದ ಸಹಕರಿಸಿದರು. ವಿದ್ಯಾರ್ಥಿಗಳಿಗೆ ಲಘು ಉಪಹಾರ, ಮಧ್ಯಾಹ್ನದ ಭೋಜನ ನೀಡಲಾಯಿತು.










