ಚೆನ್ನಾವರ: ಅಭ್ಯುದಯ ಯುವಕ ಮಂಡಲದಿಂದ ಎಲ್.ಕೆ.ಜಿ, ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆ

0

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲೆಯ ಎಲ್.ಕೆ.ಜಿ ,ಯು.ಕೆ.ಜಿ. ವಿದ್ಯಾರ್ಥಿಗಳಿಗೆ 2 ಜತೆ ಸಮವಸ್ತ್ರವನ್ನು ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.

ಶಾಲಾ ಮುಖ್ಯಗುರು ಮಲ್ಲೇಶಯ್ಯ ಎಚ್.ಎಂ.ಮಾತನಾಡಿ, ಚೆನ್ನಾವರ ಶಾಲೆಗೆ ಅಭ್ಯುದಯ ಯುವಕ ಮಂಡಲದ ವತಿಯಿಂದ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ.ಶಾಲೆಗೆ ಬೇಕಾದ ಮೂಲಭೂತ ವ್ಯವಸ್ಥೆಗಳಾದ ಸ್ಮಾರ್ಟ್ ಕ್ಲಾಸ್, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕ್ ,ಹೈಟೆಕ್ ಶೌಚಾಲಯ ಮೊದಲಾದ ವ್ಯವಸ್ಥೆಗಳನ್ನು ದಾನಿಗಳು ಹಾಗೂ ಸಂಸ್ಥೆಯ ದೇಣಿಗೆಯ ಮೂಲಕ ಅನುಷ್ಠಾನ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.ಶಾಲೆಯಲ್ಲಿ ಕಳೆದ ವರ್ಷದಿಂದ ಎಲ್‌ಕೆ‌ಜಿ,ಯುಕೆಜಿ ಆರಂಭಿಸಲಾಗಿದೆ.ಈ ಕಾರ್ಯದಲ್ಲೂ ಯುವಕ ಮಂಡಲದ ಪಾತ್ರ ಸಾಕಷ್ಟಿದೆ ಎಂದರು.

ಈ ಸಂದರ್ಭದಲ್ಲಿ ಚೆನ್ನಾವರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ನಾಯ್ಕ ಕೆ. , ಉಪಾಧ್ಯಕ್ಷೆ ದೀಪ್ತಿ ಪುನೀತ್ ರೈ ,ಅಭ್ಯುದಯ ಯುವಕ ಮಂಡಲದ ಅಧ್ಯಕ್ಷ ಪುಟ್ಟಣ್ಣ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕರಾದ ಶೀಲಾವತಿ ಸ್ವಾಗತಿಸಿದರು. ರಾಜೇಶ್ವರಿ ವಂದಿಸಿದರು.

LEAVE A REPLY

Please enter your comment!
Please enter your name here