






ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಯ ಜೀವನ್ ಸಂತೋಷ್ ಮಾರ್ಟಿಸ್ ಅವರು ಕೆ.ಎಸ್.ಆರ್.ಟಿ.ಸಿ.ಯ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ.


1999ರ ಜನವರಿಯಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ವಾಹಕ ಹುದ್ದೆಗೆ ನೇಮಕಗೊಂಡು ನಿರಂತರ 15 ವರ್ಷ ಸೇವೆ ಸಲ್ಲಿಸಿದ್ದ ಜೀವನ್ ಸಂತೋಷ್ ಮಾರ್ಟಿಸ್ ಅವರು ನಂತರ ಕರ್ತವ್ಯದಲ್ಲಿದ್ದಾಗ ಆದ ಅಪಘಾತದಿಂದಾಗಿ ವೈದ್ಯಕೀಯ ನೆಲೆಯಲ್ಲಿ 12 ವರ್ಷ ಪರ್ಯಾಯ ಹುದ್ದೆಗೆ ನಿಯೋಜನೆಗೊಂಡು ಘಟಕದ ಉಗ್ರಾಣ ಶಾಖೆಯಲ್ಲಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಸೇವಾ ಜೇಷ್ಠತೆ ಮೇಲೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಇವರಿಗೆ ಸಂಚಾರ ನಿಯಂತ್ರಕರಾಗಿ ಬಡ್ತಿ ನೀಡಿದ್ದು ಪುತ್ತೂರು ವಿಭಾಗದ ತನಿಖಾ ದಳದ ತನಿಖಾಧಿಕಾರಿಯಾಗಿ ನಿಯೋಜನೆ ಮಾಡಿದ್ದಾರೆ. ಜೀವನ್ ಸಂತೋಷ್ ಮಾರ್ಟಿಸ್ ಅವರು ಕೆ.ಎಸ್.ಆರ್.ಟಿ.ಸಿ. ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಮತ್ತು ಪುತ್ತೂರು ವಿಭಾಗದ ನೌಕರರ ಕೂಟ ಸಂಘಟನೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಪತ್ನಿ ರೆನಿಟಾ ಸುಷ್ಮಾ ಮಾರ್ಟಿಸ್ , ಪುತ್ರರಾದ ಜೆನೀಷ್ ಹಾಗು ಜೀತನ್ ಮಾರ್ಟಿಸ್ ಅವರೊಂದಿಗೆ ಪುತ್ತೂರಿನಲ್ಲಿ ವಾಸವಿದ್ದಾರೆ.













