







ಸರಕಾರ ಪಾಲು ಬಂಡವಾಳ ಪೂರ್ಣ ಸರಕಾರಕ್ಕೆ ಮರುಪಾವತಿ-ಪೂವಪ್ಪ ನಾಯ್ಕ


ಪುತ್ತೂರು: ಪರಿಶಿಷ್ಠ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘದಲ್ಲಿ ಸರಕಾರ ಪಾಲು ಬಂಡವಾಳವೇ ಅಧಿಕ ಪ್ರಮಾಣದಲ್ಲಿದ್ದು ಅದನ್ನು ಸಂಪೂರ್ಣವಾಗಿ ಸರಕಾರಕ್ಕೆ ಮರುಪಾವತಿಸುವುದಾಗಿ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು ಹೇಳಿದರು.




ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.10ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಪ್ರಸ್ತುತ ಸರಕಾರದ ಪಾಲು ದೊಡ್ಡ ಮೊತ್ತದಲ್ಲಿರುತ್ತದೆ. ವಾರ್ಷಿಕ ಲಾಭಾಂಶದಲ್ಲಿ ಡಿವಿಡೆಂಡ್ ವಿತರಣೆಯ ಸಂದರ್ಭದಲ್ಲಿ ಅತ್ಯಧಿಕ ಮೊತ್ತ ಸರಕಾರದ ಪಾಲಾಗುತ್ತದೆ. ಸದಸ್ಯರಿಗೇ ಡಿವಿಡೆಂಡ್ನ ಹೆಚ್ಚು ಲಾಭ ದೊರೆಯಬೇಕು ಎಂಬ ಉದ್ದೇಶದಿಂದ ಸಂಘದಲ್ಲಿರುವ ಸರಕಾರದ ಪಾಲು ಬಂಡವಾಳವನ್ನು ಸಂಪೂರ್ಣವಾಗಿ ಸರಕಾರಕ್ಕೆ ಮರುಪಾವತಿಸಲು ಆಡಳಿತ ಮಂಡಳಿ ಚಿಂತನೆ ಮಾಡಿದೆ. ಮುಂದೆ ಸಂಘದಲ್ಲಿ ಸದಸ್ಯತನವನ್ನು ಏರಿಕೆ ಮಾಡುವ ಜೊತೆಗೆ ಸದಸ್ಯರ ಪಾಲು ಬಂಡವಾಳದ ಮೊತ್ತವನ್ನು ಏರಿಕೆ ಮಾಡಬೇಕಾಗುತ್ತದೆ. ಸದಸ್ಯರು ಸಂಘದ ಮುಖಾಂತರವೇ ಅತೀ ಹೆಚ್ಚು ವ್ಯವಹರಿಸಿ, ಸಂಘವು ಅತೀ ಹೆಚ್ಚು ಲಾಭ ಗಳಿಸಿದಾಗ ಉತ್ತಮ ರೀತಿಯಲ್ಲಿ ಡಿವಿಡೆಂಡ್ನ್ನು ಸದಸ್ಯರಿಗೆ ವಿತರಿಸಲಾಗುವುದು. ಇದಕ್ಕೆಲ್ಲಾ ಸದಸ್ಯರೆಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.

ಕಡಬದಲ್ಲಿ ಸ್ವಂತ ಕಟ್ಟಡ:
ಕಡಬದಲ್ಲಿ ಈಗಾಗಲೇ ಸಂಘದ ಶಾಖೆ ವ್ಯವಹರಿಸುತ್ತಿದೆ. ಸಂಘದಿAದ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸ ಉತ್ತಮ ಸೇವೆ ನೀಡುವ ಯೋಜನೆಯಿಂದ ಆದರೆ ಜಾಗದ ಕೊರತೆಯಿದೆ. ಸ್ವಂತ ಕಟ್ಟಡ ನಿರ್ಮಾಣಗೊಂಡ ಬಳಿಕ ಬ್ಯಾಂಕಿAಗ್ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಧ್ಯಕ್ಷ ಪೂವಪ್ಪ ನಾಯ್ಕ ಹೇಳಿದರು.

14.21ಲಕ್ಷ ಲಾಭ:
ಸಂಘವು ವರದಿ ಸಾಲಿನಲ್ಲಿ ರೂ.14,21,994.71ನಿವ್ವಳ ಲಾಭ ಗಳಿಸಿದರುತ್ತದೆ. ಸಂಘದ ಉಪನಿಬಂಧನೆಯAತೆ ಲಾಭಾಂಶವನ್ನು ವಿಂಗಡಣೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಂಘದ ವ್ಯವಹಾರ:
ವರದಿ ವರ್ಷದಲ್ಲಿ ಸಂಘವು ರೂ.53,94,238 ಪಾಲು ಬಂಡವಾಳ ಹಾಗೂ ರೂ.24,15,616 ಸರಕಾರದ ಪಾಲು ಬಂಡವಾಳವಿರುತ್ತದೆ. ರೂ.1,08,39,695.24 ಸಂಚಯ ಠೇವಣಿ, ರೂ.14,41,650, ಮಾಸಿಕ ಠೇವಣಿ, ರೂ.5,94,54,060,ನಿರಖು ಠೇವಣಿ, ರೂ.87,56,153 ಸ್ವರ್ಣ ನಿತ್ಯನಿಧಿ ಠೇವಣಿ, ಹಾಗೂ 4,75,100ಲಕ್ಷಾಧೀಶ ಯೋಜನೆಯಲ್ಲಿ ಠೇವಣಿ, ರೂ.73,17,474.29 ಕ್ಷೇಮ ನಿಧಿ ಹಾಗೂ ರೂ.1,61,18,961.91 ರೂ.ಇತರ ನಿಧಿಗಳನ್ನು ಹೊಂದಿರುತ್ತದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ರೂ.60,24,564.10, ವಿವಿಧ ಸಹಕಾರ ಸಂಘಗಗಳಲ್ಲಿ ಒಟ್ಟು ರೂ.1,87,42,602.74ನ್ನು ವಿನಿಯೋಗ ಮಾಡಲಾಗಿದೆ. ರೂ.71,500ನ್ನು ವಿವಿಧ ಬ್ಯಾಂಕ್ಗಳಲ್ಲಿ ಪಾಲು ಬಂಡವಾಳದಲ್ಲಿ ವಿನಿಯೋಗಿಸಲಾಗಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ಒಟ್ಟು ರೂ.6,24,95,049ನ್ನು ಸಾಲ ವಿತರಿಸಲಾಗಿದ್ದು ಶೇ.97.40 ಸಾಲ ವಸೂಲಾತಿಯಾಗಿರುತ್ತದೆ ಎಂದು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಮಾಹಿತಿ ನೀಡಿದರು.
ಹಿರಿಯ ಸದಸ್ಯರು, ಸಾಧಕರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಸೋಮಪ್ಪ ನಾಯ್ಕ ಬಾಜುಪುಳಿ ಪಾಣಾಜೆ, ಕೊರಗಪ್ಪ ನಾಯ್ಕ ಅಜ್ಜಿಕಟ್ಟೆ ಕೋಡಿಂಬಾಳ, ಉಮಾನಾಥ ನಾಯ್ಕ ಕೊಡಂಚರಮೂಲೆ ಕೊಡಿಪ್ಪಾಡಿ, ಯೋಗೀಂದ್ರ ನಾಯ್ಮ ಏಣಿತ್ತಡ್ಕ, ಪ್ರಗತಿಪರ ಕೃಷಿಕ ಪದ್ಮನಾಭ ನಾಯ್ಕ ಕೊಡಂಕಿರಿ ಮುಂಡೂರು, ಎಂ.ಕಾAನಲ್ಲಿ ಚಿನ್ನದ ಪದಕ ಪಡೆದ ಲಾವಣ್ಯ ಹಾರಾಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಉಮಾನಾಥ ನಾಯ್ಕ, ಪದ್ಮನಾಭ ನಾಯ್ಮ ಕೊಡಂಕಿರಿ ಹಾಗೂ ಲಾವಣ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗೌರವಾರ್ಪಣೆ:
ಸಂಘದ ವರದಿ ಸಾಲಿನ ಹೊಸ ಲಕ್ಷಾದೀಶ ಯೋಜನೆಯಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ಸಂಘದ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ, ಸಿಬ್ಬಂದಿಗಳಾದ ಸುಮನ್ರಾಜ್ ಆರ್., ಬಾಬು ನಾಯ್ಕ ಎಚ್., ಹರೀಶ ನಾಯ್ಕ ಎಂ., ನಾಣ್ಯಪ್ಪ ಪಿ., ಪೂವಪ್ಪ ನಾಯ್ಕ, ವಸಂತ ಎಂ., ಭವ್ಯ, ರೇವತಿ, ಸಾಲ ವಸೂಲಾತಿಯಲ್ಲಿ ಸಾಧನೆ ಮಾಡಿದ ಕೃಷ್ಣಪ್ಪ ನಾಯ್ಕ ಹಾಗೂ ಪಿಗ್ಮಿ ಸಂಗ್ರಾಹಕರಾದ ರಾಮಣ್ಣ ನಾಯ್ಕ, ಶೇಖರ ನಾಯ್ಕ, ಅಶ್ವಿನಿ ಮತ್ತು ಶಿಲ್ಪಾ ಅವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ನೇತ್ರಾಕ್ಷ, ನಾರಾಯಣ ನಾಯ್ಕ, ರಾಧಾ ಹೆಂಗ್ಸು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಉಮೇಶ್ ದಾಸರಮೂಲೆ, ಅಣ್ಣಿ ನಾಯ್ಕ ಕಡಬ, ಹೊನ್ನಪ್ಪ ನಾಯ್ಕ, ಬಾಲಕೃಷ್ಣ ನಾಯ್ಕ ಏಣಿತ್ತಡ್ಕ ವಿವಿಧ ಅಭಿಪ್ರಾಯಗಳನ್ನು ನೀಡಿದರು.
ಅಧ್ಯಕ್ಷ ಪೂವಪ್ಪ ನಾಯ್ಕ ಸ್ವಾಗತಿಸಿ, ಉಪಾಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ವಂದಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಜಿ. ವರದಿ ಲೆಕ್ಕಪತ್ರಗಳನ್ನು ಮಂಡಿಸಿದರು. ಲೆಕ್ಕಿಗ ಸುಮನ್ರಾಜ್ ಮುಂದಿನ ಆಯ-ವ್ಯಯ ಮಂಡಿಸಿದರು. ನಿರ್ದೇಶಕರಾದ ಮಂಜುನಾಥ ಎನ್.ಎಸ್., ಧರ್ಣಪ್ಪ ನಾಯ್ಕ, ಪೂವಪ್ಪ ನಾಯ್ಕ ಎಸ್., ಮಹಾಲಿಂಗ ನಾಯ್ಕ, ಕರುಣಾಕರ ಟಿ.ಎನ್. ಹಾಗೂ ಜಯಶ್ರೀ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿ ಭವ್ಯ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.










