







ಪುತ್ತೂರು: ಮೊಗೇರ ಮಹಿಳಾ ಸಂಘ ದಿಂದ ಆಟಿದ ದುನಿಪು ಕಾರ್ಯಕ್ರಮ ಪುತ್ತೂರಿನ ಮಾತೃ ಛಾಯ ಸಭಾಂಗಣ ದಲ್ಲಿ ಆ 16ರಂದು ನಡೆಯಿತು.ಕಾರ್ಯಕ್ರಮ ವನ್ನು ಮೊಗೇರ ಸಂಘ ದ ಅಧ್ಯಕ್ಷ ಸುಂದರ ಕೇಪುಳ್ ಉದ್ಘಾಟಿಸಿದರು.



ಸುಂದರ ಗೋಳಿಪದವು ಆಟಿ ತಿಂಗಳ ವಿಶೇಷ ದ ಬಗ್ಗೆ ವಿವರಿಸಿದರು.ಬಲ್ನಾಡ್ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ಉಪನ್ಯಾಸಕ ಶ್ರೀ ಬಾಲಕೃಷ್ಣ ಕೇಪುಳ್ ಮೊಗೇರ ದೈವಗಳ ಹುಟ್ಟು ಜೀವನ ಮತ್ತು ಕಾರ್ಣಿಕ ಮೆರೆದ ಬಗ್ಗೆ ಸವಿಸ್ತಾರ ವಾಗಿ ವಿವರಿಸಿದರು.



ಶ್ರೀಮತಿ ಲಲಿತ ನೆಕ್ಕರೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಯಲ್ಲಿ ಯುವ ವೇದಿಕೆ ಸುಂದರ ಸಾರ್ಯ ಖಜಾಂಚಿ ರಾಘವ ಖಂಡಿಗ ಗೌರವಧ್ಯಕ್ಷ ಸದಾನಂದ ಮಾಸ್ಟರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಲೋಕೇಶ್ ಎಂ. ಹೆಚ್, ಧನಂಜಯ ಕಬಕ, ಧನಂಜಯ ಭಕ್ತ ಕೋಡಿ, ಚಂದ್ರ ಬೀರಿಗ ಮೀನಾಕ್ಷಿಕುಕ್ಕಾಡಿ, ಮಮತ ಜಿ, ಪೂರ್ಣಿಮಾ ಕೊಡಿಯಾಲ್, ನಾರಾಯಣ ಪಾರೆಸ್ಟ್, ಆಶಾಕಿರಣ, ಸವಿತ ಈಶ್ವರ ಮಂಗಳ, ನಳಿನಿ ಕುಂಬ್ರುಗ,.ಶ್ವೇತ ನಾಗೇಶ್, ಸಂದೀಪ್ ಬಪ್ಪಳಿಗೆ, ವೆಂಕಟೇಶ್ ಕೆಮ್ಮಿಂಜೆ. ಮುಖೇಶ್ ಕೆಮ್ಮಿಂಜೆ,ಉಪಸ್ಥಿತರಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಸಂವಿಧಾನ ದ ಪೀಠಿಕೆ ಭೋದಿಸಿದರು. ಮಧ್ಯಾಹ್ನ ಭೋಜನ ದ ನಂತರ ಒಳಾಂಗಣ ಕ್ರೀಡಾ ಕೂಟ ನಡೆಯಿತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕುಸುಮ ಕುಕ್ಕಾಡಿ ಸ್ವಾಗತಿಸಿ, ಉಷಾ ಮುಖೇಶ್ ಧನ್ಯವಾದ ವಿತ್ತರು. ಸುಂದರಿ ಸಾರ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.










