ನಾಳೆ(ಆ.17) ಪರ್ಪುಂಜ ಶ್ರೀ ರಾಮಜಾಲು ಗರಡಿಯಲ್ಲಿ ವಿಜೃಂಭಣೆಯ ‘ನಾಗರ ಪಂಚಮಿ’ ಆಚರಣೆ

0

​ಪುತ್ತೂರು: ತುಳುನಾಡಿನ ಪವಿತ್ರ ವೀರಪುರುಷರಾದ ಕೋಟಿ-ಚೆನ್ನಯರು ನಡೆದಾಡಿದ ಪುಣ್ಯಭೂಮಿ ಹಾಗೂ ಶ್ರೀ ರಾಮ-ಲಕ್ಷ್ಮಣರು ಸಂಚರಿಸಿದ ವೀರಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನ ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ಆ.17ರಂದು ಅತ್ಯಂತ ವಿಜೃಂಭಣೆಯಿಂದ “ನಾಗರ ಪಂಚಮಿ” ಹಬ್ಬವನ್ನು ಆಚರಿಸಲಾಗುವುದು.


​ಈ ಧಾರ್ಮಿಕ ಪರ್ವದಿನದಂದು ಬೆಳಿಗ್ಗೆಯಿಂದಲೇ ಶ್ರೀ ನಾಗದೇವರಿಗೆ ವಿಶೇಷ ಸಿಯಾಳಾಭಿಷೇಕ ಹಾಗೂ ಹಾಲಿನ ಅಭಿಷೇಕ ಸೇವೆಗಳು ಶ್ರದ್ಧಾ-ಭಕ್ತಿಗಳಿಂದ ನೆರವೇರಲಿವೆ.


​ಈ ಪುಣ್ಯಕರ ಧಾರ್ಮಿಕ ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ನಾಗದೇವರ ಕೃಪೆಗೆ ಪಾತ್ರರಾಗಿ ಗಂಧ-ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಗರಡಿಯ ಆಡಳಿತ ಮೊಕ್ತೇಸರರಾದ ಕೆ. ಸಂಜೀವ ಪೂಜಾರಿ ಕೂರೇಲು ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here