ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

451.40 ಕೋಟಿ ರೂ. ವ್ಯವಹಾರ| 1.91 ಕೋಟಿ ರೂ.ಲಾಭ| ಶೇ.15 ಡಿವಿಡೆಂಡ್ – ಅಧ್ಯಕ್ಷ ತಾರಾನಾಥ ಕಾಯರ್ಗ ಘೋಷಣೆ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 451.40 ಕೋಟಿ ರೂ.ಗಳ ವ್ಯವಹಾರ ಮಾಡಿ 1.91 ಕೋಟಿ ರೂ.ಲಾಭಗಳಿಸಿದೆ.ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು.

ಆ.16ರಂದು ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಸದಸ್ಯರ ಸಹಕಾರದಿಂದಾಗಿ ಸಂಘವು ಸತತವಾಗಿ 24ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.31 ಸಾಲ ವಸೂಲಾತಿ ಸಾಧನೆ ಮಾಡಿದೆ.ವರದಿ ವರ್ಷದಲ್ಲಿ 3,566 ಸದಸ್ಯರಿದ್ದು, ರೂ.5.81 ಕೋಟಿ ಪಾಲು ಬಂಡವಾಳ ಮತ್ತು ರೂ.45.98 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ 6 ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿದ್ದು, ಸದಸ್ಯರಿಗೆ ರೂ 74.64 ಕೋಟಿ ಸಾಲ ವಿತರಿಸಲಾಗಿದೆ. ವರ್ಷಾಂತ್ಯಕ್ಕೆ ರೂ.63.49 ಕೋಟಿ ಹೊರಬಾಕಿ ಸಾಲ ಇರುತ್ತದೆ ಎಂದವರು ಹೇಳಿದರು. ಜಿಲ್ಲೆಯಲ್ಲೇ ಸತತ ಮೂರು ವರ್ಷಗಳಿಂದ ಮಾಸ್ ಸಂಸ್ಥೆಯ ಮೂಲಕ ಅತೀ ಹೆಚ್ಚು ಅಡಿಕೆ ಖರೀದಿ ನಮ್ಮ ಸಂಘದಲ್ಲಿ ಆಗಿದೆ ಎಂದ ಅಧ್ಯಕ್ಷರು, ಅರ್ಥಿಕ ವ್ಯವಹಾರದೊಂದಿಗೆ ಸಮಾಜಮುಖಿ ಕರ‍್ಯಗಳನ್ನು ಸಂಘ ಮಾಡುತ್ತಿದೆ.ಈ ವರ್ಷ ಕುದ್ಮಾರಿನಲ್ಲಿ ಬಹೃತ್ ಆರೋಗ್ಯ ಶಿಬಿರವನ್ನು ಮಾಡಿದ್ದೇವೆ.ಇದರಿಂದ ಬಹಳಷ್ಟು ಮಂದಿಗೆ ಪ್ರಯೋಜನವಾಗಿದೆ. ರೈತ ಸದಸ್ಯರುಗಳಿಗೆ ಅಡಕೆ ಜೊತೆ ಉಪಬೆಳೆಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಮಾಸ್ ಸಂಸ್ಥೆಯ ಸಹಕಾರದಲ್ಲಿ ಪ್ರತಿ ದಿನ ಅಡಿಕೆ ಖರೀದಿ:
ಪ್ರತಿ ದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ ಖರೀದಿ ವ್ಯವಹಾರ ಮಾಡಲಾಗುತ್ತಿದೆ.2025-26ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 887.81 ಕ್ವಿಂಟ್ವಾಲ್ ಅಡಿಕೆ ಖರೀದಿಸಿ, 4.33 ಕೋಟಿ ರೂ.ವ್ಯವಹಾರ ಮಾಡಲಾಗಿದೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದರು.


ಉನ್ನತ ಸಾಧನೆ ಮಾಡಿದ ಸಂಘ -ರಾಕೇಶ್ ರೈ:
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಭದ್ರವಾಗಿ ನೆಲೆ ನಿಂತಿದೆ. ಇದಕ್ಕೆ ಮೂಲ ಕಾರಣ ಉತ್ತಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ.ಸುಮಾರು 6 ಕೋಟಿ ರೂ.ಹೆಚ್ಚುವರಿಯಾಗಿ ಠೇವಣಿ ಸಂಗ್ರಹವಾಗಿದೆ ಎಂದರೆ, ಈ ಸಹಕಾರ ಸಂಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆ,ವಿಶ್ವಾಸವೇ ಕಾರಣ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ಆಡಳಿತ ಮಂಡಳಿ, ಸಂಘದ ಮುಖ್ಯ ಕರ‍್ಯನಿರ್ವಹಣಾಽಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿಗಳ ಅವಿರತ ಪ್ರಯತ್ನದ ಫಲವಾಗಿ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದೆ. ಸದಸ್ಯರುಗಳಿಗೆ ಶೇಕಡಾ 15 ಡಿವಿಡೆಂಡ್ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಹತ್ತು ಹಲವು ಜನೋಪಯೋಗಿ ಕರ‍್ಯದಲ್ಲಿ ಭಾಗಿಯಾಗಿದೆ. ಮಾನವೀಯ ನೆಲೆಯಲ್ಲಿ ಅನೇಕ ಧನಸಹಾಯವನ್ನು ನೀಡಲಾಗಿದೆ. ಆದರೆ ಅದನ್ನು ಎಂದಿಗೂ ಫೋಟೋ ತೆಗೆದು ಪ್ರಚಾರ ಮಾಡಿಲ್ಲ. ಒಟ್ಟಿನಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉನ್ನತವಾದ ಸಾಧನೆಯನ್ನು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾಸಭೆಯು ಮದುವೆ ವಾತಾವರಣವನ್ನು ಸೃಷ್ಟಿಸಿದೆ, ಸೌಹಾರ್ದಯುತ ಚರ್ಚೆ, ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಒಟ್ಟಿನಲ್ಲಿ ಸವಣೂರಿನಲ್ಲಿ ಹಬ್ಬದ ವಾತಾವರಣ ಮೂಡಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.


ಪುಣ್ಚಪ್ಪಾಡಿ ಶಾಖೆ ಪೂರ್ಣ ಪ್ರಮಾಣದಲ್ಲಿ ಆಗಲಿ:
ಸವಣೂರು ಮತ್ತು ಕಾಣಿಯೂರು ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಿರಿಶಂಕರ್ ಸುಲಾಯರವರು ಮಾತನಾಡಿ ಪುಣ್ಚಪ್ಪಾಡಿಯ ನೇರೋಳ್ತಡ್ಕದಲ್ಲಿ ಸಂಘದ ಶಾಖೆಯು ಕರ‍್ಯನಿರ್ವಹಿಸುತ್ತಿದ್ದು, ಸಂಘದ ಈ ಶಾಖೆಯನ್ನು ಪೂರ್ಣ ಪ್ರಮಾಣದ ಶಾಖೆಯಾಗಿ ಬಲಪಡಿಸಬೇಕು, ಇದರಿಂದ ಪುಣ್ಚಪ್ಪಾಡಿ ಗ್ರಾಮ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎಂದು ಸಲಹೆ ನೀಡಿದರು.ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷರು ತಿಳಿಸಿದರು.


ಬೆಳಂದೂರು ಶಾಖಾ ಕಚೇರಿಯ ಗೋದಾಮು ಕಟ್ಟಡವನ್ನು ಉತ್ತಮಗೊಳಿಸುವಂತೆ ನ್ಯಾಯವಾದಿ ಬೈತಡ್ಕ ಶೀನಪ್ಪ ಗೌಡ ಬೇಡಿಕೆ ವ್ಯಕ್ತಪಡಿಸಿದಾಗ ಉತ್ತರಿಸಿದ ಅಧ್ಯಕ್ಷರು, ಸಂಘದ ಬೆಳಂದೂರು ಶಾಖಾ ಕಟ್ಟಡವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕೆಲಸ ನಡೆಯಲಿದೆ. ಈಗಾಗಲೇ ಸಂಘದ ಮುಖ್ಯಕಚೇರಿಯಲ್ಲಿ ವಿಸ್ತೃತ ಕಟ್ಟಡ ಕಾಮಗಾರಿ ನಡೆದಿದೆ, ತಡೆಗೋಡೆ, ಕ್ರಾಂಕ್ರೀಟ್ ರಸ್ತೆ ಸಹಿತ ಅನೇಕ ಕರ‍್ಯಗಳನ್ನು ಮಾಡಲಾಗಿದೆ ಎಂದರು.


ಸಂತೆಗೆ ಸುಸಜ್ಜಿತವಾದ ಕಟ್ಟಡ:
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಯ್ಯ ಗೌಡ ಪರಣೆರವರು ಮಾತನಾಡಿ, ಸವಣೂರಿನಲ್ಲಿ ವಾರದ ಸಂತೆ ನಡೆಯುವ ಸ್ಥಳದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಆಗಿದೆ.ನಮಗೆ ಸೊಸೈಟಿ ಅವರಣದಲ್ಲಿ ಸ್ಥಳಾವಕಾಶ ಕೊಡಬಹುದೇ ಎಂದು ಕೇಳಿದಾಗ,ಸಂಘದ ಮುಖ್ಯಕರ‍್ಯನಿರ್ವಹಣಾಽಕಾರಿ ಚಂದ್ರಶೇಖರ್ ಮಾತನಾಡಿ, ಇಲ್ಲಿ ಸಂತೆ ನಡೆಸಲು ಕಷ್ಟ ಎಂದರು.ಸವಣೂರು ಬಸದಿ ಬಳಿ ಸಂತೆ ಕಟ್ಟಡಕ್ಕಾಗಿ ನಿವೇಶನ ಮಂಜೂರಾಗಿದೆ.ಅಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಎಪಿಎಂಸಿಗೆ ನಿರ್ಣಯವೊಂದನ್ನು ಕಳಿಸುವ ವ್ಯವಸ್ಥೆಯನ್ನು ಈ ಮಹಾಸಭೆಯ ಮೂಲಕ ಮಾಡಬೇಕು ಎಂದು ರಾಕೇಶ್ ರೈ ಕೆಡೆಂಜಿ ಸೂಚನೆ ನೀಡಿದರು.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಹೇಳಿದರು.


ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ರಫೀಕ್ ಎಂ.ಎ.,ಪದ್ಮಯ್ಯ ಗೌಡ ಕರಂದ್ಲಾಜೆ, ತಿರುಮಲೇಶ್ವರ ಭಟ್ ರವರು ವಿವಿಧ ಸಲಹೆ-ಸೂಚನೆಯನ್ನು ನೀಡಿದರು.


ಸಂಘದ ನಿರ್ದೇಶಕರಾದ ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ,ಎಸ್‌ಸಿಡಿಸಿಸಿ ಬ್ಯಾಂಕಿನ ಸುಪರ್‌ವೈಸರ್ ವಸಂತ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು.ಮುಖ್ಯ ಕಾರ್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ ನಿರೂಪಿಸಿದರು.ಉಪ ಕರ‍್ಯನಿರ್ವಹಣಾಽಕಾರಿ ಜಲಜಾ ಎಚ್ ರೈರವರು ವರದಿ ವಾಚಿಸಿದರು.ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕರಾದ ಲೇಖಾಲತಾರವರು ಮಹಾಸಭೆಯ ನೋಟಿಸ್ ಓದಿ ದೃಢೀಕರಿಸಿದರು.ಸಿಬ್ಬಂದಿ ಪ್ರಕಾಶ್ ಕೆಡೆಂಜಿ ಪ್ರಾರ್ಥನೆಗೈದರು. ಸಿಬ್ಬಂದಿಗಳಾದ ಮನೋಜ್ ಎ, ಪವಿತ್ರಾ ಕೆ, ಪ್ರಕಾಶ್ ಕೆ, ಪ್ರಕಾಶ್ ಎಂ, ಪೂವಪ್ಪ ಎ, ಗಣೇಶ್ ಎ.ಎನ್, ಪ್ರಕಾಶ್ ಮೊಯ್ಲಿ, ಜಗದೀಶ್ ಕೆ, ಕಾರ್ತಿಕ್, ದಯಾನಂದ ಎಂ, ಮಾಸ್ ಸಂಸ್ಥೆಯ ಸವಣೂರು ಶಾಖೆಯ ಮೇನೇಜರ್ ಚೇತನ್ ಪ್ರಕಾಶ್, ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ ಕಲಾಯಿ, ವಿಶ್ವನಾಥ ಗೌಡ,ನವೋದಯ ಪ್ರೇರಕಿ ಪ್ರೇಮಾ ಅರೆಲ್ತಡಿ ಸಹಕರಿಸಿದರು. ಮಹಾಸಭೆಯ ಪ್ರಾರಂಭದಲ್ಲಿ ಭಾರತ ಮಾತೆ ಮತ್ತು ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.


ಸಭೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ಇ.ಎಸ್.ವಾಸುದೇವ ಇಡ್ಯಾಡಿ, ನಿರ್ದೇಶಕ ಸುಬ್ಬಣ್ಣ ರೈ ಖಂಡಿಗ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ವಿಜಯ ಬ್ಯಾಂಕ್ ನಿವೃತ್ತ ಅಽಕಾರಿ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಸವಣೂರು ಮೆಸ್ಕಾಂ ಜೆಇ ರಾಜೇಶ್, ವೆಂಕಟ್ರಮಣ ಗೌಡ ಕಳುವಾಜೆ, ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಸವಣೂರು ಬೆನಸ ರಬ್ಬರ್ ಸೊಸೈಟಿ ಕರ‍್ಯದರ್ಶಿ ಅಚ್ಚುತ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಪ್ರೇಮಚಂದ್ರ ಮೆದು, ಗಂಗಾಧರ ಸುಣ್ಣಾಜೆ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ದೇವಪ್ಪ ಗೌಡ ಕನ್ನಡಕುಮೇರು, ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ಸರ‍್ಯನಾರಾಯಣ ಭಟ್, ಮಹಾಬಲ ಶೆಟ್ಟಿ ಕೊಮ್ಮಂಡ, ನ್ಯಾಯವಾದಿಗಳಾದ ಪ್ರಶಾಂತ್ ರೈ ಪುಣ್ಚಪ್ಪಾಡಿ, ಅವಿನಾಶ್ ಬೈತಡ್ಕ, ವೆಂಕಟೇಶ್ ಭಟ್ ಕೊಯಕ್ಕುಡೆ, ಸವಣೂರು ಗ್ರಾ.ಪಂ. ಮಾಜಿ ಸದಸ್ಯರಾದ ತೀರ್ಥರಾಮ್ ಕೆಡೆಂಜಿ, ಅಬ್ದುಲ್ ರಜಾಕ್ ಕೆನರಾ, ಚಂದ್ರಾವತಿ ಸುಣ್ಣಾಜೆ, ಸತೀಶ್ ಅಂಗಡಿಮೂಲೆ,ಸವಣೂರು ಬೊಳ್ಳಿ-ಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್ ಬಲ್ಯಾಯ ಕನ್ನಡಕುಮೇರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸರ‍್ಯ ರೈ ಮಾದೋಡಿ, ಆಡಳಿತಾಽಕಾರಿ ವಸಂತ್ ರೈ ಕಾರ್ಕಳ, ಬೆಳಂದೂರು ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ವಿಠಲ ಗೌಡ ಅಗಳಿ, ತೇಜಾಕ್ಷಿ ಕೊಡಂಗೆ, ನಝೀರ್ ದೇವಸ್ಯ, ಮಾಜಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಮಾಜಿ ಸದಸ್ಯರುಗಳಾದ ಸಂಪತ್ ಕುಮಾರ್ ರೈ ಪಾತಾಜೆ,ಬರೆಪ್ಪಾಡಿ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ ಬರೆಪ್ಪಾಡಿ, ಭಾಸ್ಕರ್ ಗೌಡ ಕಳುವಾಜೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಶ್ರೀಧರ್ ಸುಣ್ಣಾಜೆ, ಚಂದ್ರಶೇಖರ್ ಗೌಡ ಮೆದು, ಸತೀಶ್ ಶೆಟ್ಟಿ ಕಿನಾರ, ರಾಮಕೃಷ್ಣ ಪ್ರಭು, ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ತಾ.ಪಂ.ಮಾಜಿ ಸದಸ್ಯರಾದ ವಿಜಯ ಈಶ್ವರ ಗೌಡ ಕಾಯರ್ಗ, ಬೆಳಂದೂರು ಶಾಖೆಯ ಮಾಜಿ ವ್ಯವಸ್ಥಾಪಕರಾದ ಬೇಬಿ ಜೆ.ರೈ, ನಿವೃತ್ತ ಸಿಬ್ಬಂದಿ ಈಶ್ವರ ಗೌಡ ಕಾಯರ್ಗ, ಬೆಳಿಯಪ್ಪ ಗೌಡ ಚೌಕಿಮಠ, ಸಂಘದ ಹಿರಿಯ ಸದಸ್ಯ ನಾರಾಯಣ ಕನ್ನಡ ಬಸ್ತಿ, ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ ಹಾಗೂ ಸಂಘದ ಸದಸ್ಯರಾಗಿರುವ ಸವಣೂರು ಅನನ್ಯ ಜುವೆಲ್ಸ್ ಮಾಲಕ ಪದ್ಮನಾಭ ಆಚಾರ್ಯ, ಸವಣೂರು ಗ್ರಾ.ಪಂ.ಸಿಬ್ಬAದಿಗಳು ಸಹಿತ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು


ಸನ್ಮಾನ:
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಯೋಗದಲ್ಲಿ ಕರ‍್ಯನಿರ್ವಹಿಸುತ್ತಿರುವ ಮಾಸ್ ಸಂಸ್ಥೆಗೆ ಅತೀ ಹೆಚ್ಚು ಅಡಿಕೆಯನ್ನು ಮಾರಾಟ ಮಾಡಿದ ತಿರುಮಲೇಶ್ವರ ಭಟ್ ಸವಣೂರು, ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಜಯರಾಮ ರೈ ಪರನೀರು ಮತ್ತು 2023-24ನೇ ಸಾಲಿನಲ್ಲಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ವಿಷಯದಲ್ಲಿ ಚಿನ್ನದ ಪದಕ ಪುರಸ್ಕೃತರಾದ ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕಿ ಲೇಖಲತಾ ಮೆದು ಹಾಗೂ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ಪಕೀರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಪಕೀರ ಅವರ ಪತ್ನಿ ಲಲಿತಾ ಅವರು ಉಪಸ್ಥಿತರಿದ್ದರು.ಸನ್ಮಾನಿತ ಕೃಷ್ಣ ರೈ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.


71 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ 71 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ವಿದ್ಯಾರ್ಥಿಗಳಿಗೆ ನಗದು ನೀಡಿ ಗೌರವಿಸಲಾಯಿತು.


ಅಚ್ಚುಕಟ್ಟಾದ ವ್ಯವಸ್ಥೆ:
ಬೆಳಿಗ್ಗೆ 9.55ಕ್ಕೆ ಆರಂಭಗೊAಡ ಮಹಾಸಭೆಯು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡಿತು.ಬೆಳಿಗ್ಗೆ ಉಪಾಹಾರದಲ್ಲಿ ಸೆಟ್ ದೋಸೆ, ಕ್ಷೀರ, ಚಾ ಮತ್ತು ಕಾಫಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮತ್ತು ಸ್ಥಳದಲ್ಲೇ ಡಿವಿಡೆಂಡ್ ಹಣವನ್ನು ನೀಡುವ ವ್ಯವಸ್ಥೆ ಮಾಡಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು.ಒಂದು ಸಾವಿರದ ಐನ್ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.


ಸಂತಾಪ:
ಇತ್ತೀಚಿಗೆ ನಿಧನ ಹೊಂದಿದ ಸಂಘದ ಮಾಜಿ ಅಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯ ಮತ್ತು 2025-26ನೇ ಸಾಲಿನಲ್ಲಿ ನಿಧನ ಹೊಂದಿದ ಸದಸ್ಯರುಗಳಿಗೆ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.

ರೈತರು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು.ಸಂಘದ ಎಲ್ಲ ಸದಸ್ಯರುಗಳು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಸಂಘವು ಬಹಳಷ್ಟು ಸಾಧನೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕರ‍್ಯಗಳು ಸಂಘದ ಮುಖಾಂತರ ನಡೆಯಲಿದೆ
ತಾರಾನಾಥ ಕಾಯರ್ಗ, ಅಧ್ಯಕ್ಷರು

ಬೆಳೆವಿಮೆಗೆ ಭಾರೀ ಬೆಂಬಲ
ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ತಂಡ ಉತ್ತಮ ರೀತಿಯಲ್ಲಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಹವಾಮಾನ ಆಧಾರಿತ ಬೆಳೆವಿಮೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಇದರಿಂದ ರೈತರಿಗೆ ತುಂಬಾ ಪ್ರಯೋಜನ ದೊರೆತಿದೆ. ಸಂಘದ ಅಭಿವೃದ್ಧಿಯಲ್ಲಿ ಸದಾ ಸಹಕಾರವನ್ನು ನೀಡುತ್ತಿರುವ ಆಡಳಿತ ಮಂಡಳಿ, ಸದಸ್ಯರುಗಳು, ಸಿಬ್ಬಂದಿ ವೃಂದದವರ ಸಹಕಾರಕ್ಕೆ ಆಭಾರಿಯಾಗಿದ್ದೇನೆ
ಚಂದ್ರಶೇಖರ್ ಪಿ, ಕಾರ್ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here