ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿ ವತಿಯಿಂದ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಉಚಿತ ಈಜು ತರಬೇತಿ ಯೋಜನೆಗೆ ಚಾಲನೆ

0

ಅಡ್ಯನಡ್ಕ: ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿ ವತಿಯಿಂದ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ದೀರ್ಘಾವಧಿಯ ಉಚಿತ ಈಜು ತರಬೇತಿ ಯೋಜನೆಯನ್ನು ಆಗಸ್ಟ್ 24ರಂದು ಉದ್ಘಾಟಿಸಲಾಯಿತು.



ಅಂತರರಾಷ್ಟ್ರೀಯ ಈಜು ತರಬೇತುದಾರ ಹಾಗೂ ಫಿನ್‌ಲ್ಯಾಂಡ್ ದೇಶದ ಖ್ಯಾತ ಈಜುಪಟು ಮಟ್ಟಿ ರಾಜಕೈಲಾ ಅವರು ತರಬೇತಿ ಯೋಜನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿಯ ಮುಖ್ಯಸ್ಥರಾದ ಪಾರ್ಥ ವಾರಣಾಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.



ಈಜು ತರಬೇತುದಾರರಾದ ವಿಕಾಸ್ ಅವರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸಲಹೆ-ಸೂಚನೆಗಳನ್ನು ನೀಡಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಆರ್. ಎಸ್. ವಂದಿಸಿದರು.

LEAVE A REPLY

Please enter your comment!
Please enter your name here