ಸದಾಶಿವ ಪೈ ಕುಟುಂಬದ ಬೆಂಬಲಕ್ಕೆ ನಿಂತ ಜಿಎಸ್‌ಬಿ ಗೆಳೆಯರ ಬಳಗ

0

ಪುತ್ತೂರು: ದರ್ಬೆ ಘಟನೆಯಲ್ಲಿ ನೊಂದಿರುವ ಜಿಎಸ್‌ಬಿ ಸಮುದಾಯದ ಅಂಗಡಿ ಮಾಲಕಿ ಅಂಜನಾ ಪೈ ಹಾಗೂ ಸುದರ್ಶನ್ ಪೈ ಕುಟುಂಬಕ್ಕೆ ಧೈರ್ಯ ತುಂಬಲು ಜಿಎಸ್‌ಬಿ ಗೆಳೆಯರ ಬಳಗದ ಸುಮಾರು 30 ಮಂದಿ ಆ.24ರಂದು ಆದರ್ಶ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದ್ದಾರೆ.

ಕಷ್ಟದ ಸಮಯದಲ್ಲಿ ಸಮುದಾಯದ ಪ್ರತಿಯೊಬ್ಬರೂ ನಿಮ್ಮೊಂದಿಗಿದ್ದೇವೆ. ನ್ಯಾಯ ಸಿಗುವವರೆಗೂ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಪ್ರಮುಖರು ತಿಳಿಸಿದ್ದಾರೆ.

ಜಿ ಎಸ್ ಬಿ ಗೆಳೆಯರ ಬಳಗ ಸದಸ್ಯರುಗಳಾದ ಸಮಾಜದ ಹಿರಿಯರಾದ ನಿವೃತ್ತ ಯೋಧರಾದ ನರಸಿಂಹ ಭಂಡಾರ್ಕರ್, ರಾಜಕೀಯ ಮುಂದಾಳು ದಾಮೋದರ್ ಭಂಡಾರ್ಕರ್, ಅವಿನಾಶ್ ಭಂಡಾರ್ಕರ್, ಉಮೇಶ್ ನಾಯಕ್, ನರಸಿಂಹ ಹೆಗ್ದೆ, ದಾಮೋದರ ಹೆಗ್ಡೆ ಉಲ್ಲಾಸ್ ಪೈ, ರಾಮಚಂದ್ರ ಪ್ರಭು, ರವಿ ಮಲ್ಯ, ದಿನೇಶ್ ಭಟ್, ಸುನಿಲ್ ಕಾಮತ್ ಇನ್ನಿತರ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here