ಮಠ ಬದ್ರಿಯಾದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

0

ಪುತ್ತೂರು: ಮಠ ಬದ್ರಿಯಾ ಜುಮಾ ಮಸೀದಿಯಿಂದ ಕೂಟೇಲ್ ದರ್ಗಾ ಶರೀಫ್ ವರೆಗೆ ಮುಸ್ಲಿಂ ಬಾಂಧವರು ಮೆರವಣಿಗೆಯೊಂದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಮಿಲಾದ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಮಠ ಮಸೀದಿ ಅಧ್ಯಕ್ಷ ಎಂ.ಕೆ. ಆಸಿಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬರಾದ ಅಸಯ್ಯದ್ ಮೊಹಮ್ಮದ್ ಇಂಬಿಚ್ಚಿಕೋಯ ತಂಗಲ್ ದುವಾ ನೆರವೇರಿಸಿದರು.ಬಳಿಕ ಕುವತುಲ್ ಇಸ್ಲಾಂ ಮದರಸದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನಜೀರ್ ಮಠ, ಆದಮ್ ಕೊಪ್ಪಳ, ನಾಸಿರ್ ವೈಯನ್ಕೆ, ಮುಸ್ತಫ ಕೆ.ಪಿ., ಸಿರಾಜ್ ಸಕಾಫಿ, ರಶೀದ್ ಯು.ಎಂ., ಮುಸ್ತಫ ಜೆಸಿಬಿ, ಯಂಗ್ ಮೆನ್ಸ್ ಅಧ್ಯಕ್ಷ ಸಾಬೀತ್ ಮಠ, ರಸೀದ್ ಎಚ್.ಎನ್., ಅಧ್ಯಾಪಕರು ಮತ್ತು ಊರಿನವರು ಉಪಸ್ಥಿತರಿದ್ದರು. ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here