ಕಡಬ: ಶಿವಮೊಗ್ಗ ಗೋಶಾಲೆಗೆ ಅಶಕ್ತ ಗೋವುಗಳ ಸ್ಥಳಾಂತರ

0

ಕಡಬ: ವಿಶ್ವ ಹಿಂದೂ ಪರಿಷತ್‌ ಕಡಬ ಪ್ರಖಂಡದ ವತಿಯಿಂದ ಕಡಬ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸಾಕಲು ಅಶಕ್ತವಾಗಿದ್ದ ಗೋವುಗಳನ್ನು ಶಿವಮೊಗ್ಗ ಜಿಲ್ಲೆಯ ಶಕ್ತಿನಗರದಲ್ಲಿರುವ ಶ್ರೀ ಮಹಾವೀರ ಗೋಶಾಲೆಗೆ ಯಶಸ್ವಿಯಾಗಿ ಸ್ಥಳಾಂತರಿಸಿ ಸೇರಿಸಲಾಯಿತು.


ಸಾಕಲು ಅಶಕ್ತವಾಗಿರುವ ಗೋವುಗಳಿಗೆ ಸುರಕ್ಷಿತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಗೋವುಗಳನ್ನು ಗೋಶಾಲೆಗೆ ಸಾಗಿಸಲು ಪಶುವೈದ್ಯಾಧಿಕಾರಿ ಡಾ. ಅಜಿತ್ ಅವರು ಕಾನೂನು ಪ್ರಕ್ರೀಯೆ ನಡೆಸಿ ಅನುಮತಿ ನೀಡಿದ್ದರು.
ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳ ಪ್ರಖಂಡ ಸಹ ಸಂಯೋಜಕ ರಕ್ಷಿತ್ ಕೇಪು, ಪ್ರಚಾರ ಪ್ರಸಾರ ಪ್ರಮುಖ್ ಚೇತನ್ ಕೊಡಿಂಬಾಳ, ಜಯಂತ ಕಲ್ಲುಗುಡ್ಡೆ, ಕೌಶಿಕ್ ಬಳ್ಳಿತ್ತಡ್ಡ ಹಾಗೂ ತೀರ್ಥೇಶ್ ಮೀನಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here