ಸಿಆರ್‌ಪಿಎಫ್‌ನಲ್ಲಿ ಈಶ್ವರಮಂಗಲದ ರಾಧಾಕೃಷ್ಣ ರೈಗೆ ಹೆಡ್ ಕಾನ್ಸ್‌ಟೇಬಲ್‌ಗೆ ಬಡ್ತಿ

0

ಪುತ್ತೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರಮಂಗಲದ ಅರಳಿಕಟ್ಟೆ ನಿವಾಸಿ ರಾಧಾಕೃಷ್ಣ ರೈ ಕಾನ್ಸ್‌ಟೇಬಲ್‌ನಿಂದ ಹೆಡ್ ಕಾನ್ಸ್‌ಟೇಬಲ್ ಆಗಿ ಬಡ್ತಿ ಪಡೆದಿದ್ದಾರೆ.

ಇವರು 2003ರಲ್ಲಿ ಬೆಂಗಳೂರಿನಲ್ಲಿ ಆಯ್ಕೆಯಾಗಿ ತಿರುವನಂತಪುರದಲ್ಲಿ ತರಬೇತಿ ಪೂರ್ಣಗೊಳಿಸಿದ್ದರು. 2004ರಿಂದ ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ಬೆಂಗಳೂರು ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದು, ಪ್ರಸ್ತುತ ಒಡಿಶಾದ ಭುವನೇಶ್ವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸೆ.2ರಂದು ಕಮಾಂಡೆಂಟ್ ಸಜೀವ್ ಟಿ.ಎ. ಅವರಿಂದ ಬಡ್ತಿ ಪದವಿ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here