






ಕಾಣಿಯೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಸ್ಥಾಪನಾ ದಿನಾಚರಣೆಯನ್ನು ಕಾಣಿಯೂರು ಶಾಖೆಯಲ್ಲಿ ಸೆ.2ರಂದು ಆಚರಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯ ಸೀತಾರಾಮ ಗೌಡ ಮುಂಡಾಳ ಉದ್ಘಾಟಿಸಿ ಶುಭಹಾರೈಸಿದರು.


ಸಂಘದ ಸಲಹಾ ಸಮಿತಿ ಸದಸ್ಯ ಗೋಪಾಲಕೃಷ್ಣ ಪಟೇಲ್ ಚಾರ್ವಾಕರವರು ಮಾತನಾಡಿ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು. ಸಂಘವು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಯನ್ನು ಹೊಂದಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡು ಕಾಣಿಯೂರು ಶಾಕೆ ಅತ್ಯುತ್ತಮ ಶಾಖೆ ಮೂಡಿಬರಲಿ ಎಂದರು. ಸಂಘದ ಸಲಹ ಸಮಿತಿ ಸದಸ್ಯರಾದ ಚಂದ್ರಶೇಖರ ಗೌಡ ಬರೆಪ್ಪಾಡಿ, ಎಂ.ಎನ್ ಗೌಡ ಕಾಣಿಯೂರು, ಶೇಷಪ್ಪ ಗೌಡ ಇಡ್ಯಡ್ಕ, ವೆಂಕಟ್ರಮಣ ಗೌಡ ಮರಕ್ಕಡ, ಗ್ರಾಹಕರಾದ ವಸಂತ ಗೌಡ ಅನಿಲ ಉಪಸ್ಥಿತರಿದ್ದರು. ಶಾಖಾ ಮ್ಯಾನೇಜರ್ ಪದ್ಮಶ್ರೀ. ಪಿ ಸ್ವಾಗತಿಸಿದರು. ಕಿರಿಯ ಗುಮಾಸ್ತ ಶಿವಕುಮಾರ್ ಎಂ ವಂದಿಸಿದರು. ಸಿಬ್ಬಂದಿ ಹಿತೇಶ್ ಮೆದು, ಪಿಗ್ಮಿ ಸಂಗ್ರಾಹಕ ಗಣೇಶ್ ಕೆ ಉಪಸ್ಥಿತರಿದ್ದರು.













