41ರ ಸಂಭ್ರಮದಲ್ಲಿ ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ – ಸೆ.14-15: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಬೆಟ್ಟಂಪಾಡಿ ಶ್ರೀಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ 41ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.14 ಮತ್ತು 15ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮ:
ರಾಜೇಶ್ ಭಟ್ ಪುತ್ತೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸೆ.14ರಂದು ಬೆಳಿಗ್ಗೆ 9ರಿಂದ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆದು ಬೆಟ್ಟಂಪಾಡಿ ಶ್ರೀದುರ್ಗಾ ಕ್ಲಿನಿಕ್‌ನ ಡಾ.ಶ್ರೀಕೃಷ್ಣ ಭಟ್ ಕಜೆಮೂಲೆರವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. 9.30ರಿಂದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, 10ರಿಂದ ಗಣಪತಿ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಗಣೇಶ ಪ್ರಸಾದ-ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ರಿಂದ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸೆ.15ರಂದು ಪೂರ್ವಾಹ್ನ 9ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, 11ರಿಂದ ಗಣಪತಿ ಹೋಮ, ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸೆ.14ರಂದು ಸಂಜೆ 6.30ರಿಂದ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ, ರಾತ್ರಿ 9ರಿಂದ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದ, ಭಕ್ತಿಪ್ರಧಾನ, ಹಾಸ್ಯ, ಸಾಮಾಜಿಕ ತುಳುನಾಟಕ “ನಂಬಿಕೆದಾಯೆ” ನಡೆಯಲಿದೆ.

ಸಭಾ ಕಾರ್ಯಕ್ರಮ:
ಸೆ.14ರಂದು ಬೆಳಿಗ್ಗೆ 10.30ರಿಂದ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದೆ. ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರು ಹಾಗೂ ಯುವವಾಗ್ಮಿ ಸ್ವಸ್ತಿಕ್ ಕನ್ಯಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರು ಹಾಗೂ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಹಾಗೂ ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ, ನಿವೃತ್ತ ಮುಖ್ಯಶಿಕ್ಷಕಿ ಲಿಂಗಮ್ಮ, ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ರವಿನಾರಾಯಣ ಭಟ್ ಎಮ್., ಪುತ್ತೂರು ಯು.ಆರ್.ಪ್ರಾಪರ್ಟಿಸ್ ಮಾಲಕ ಉಜ್ವಲ್ ಪ್ರಭು, ಬೆಟ್ಟಂಪಾಡಿ ಪ್ರಗತಿ ಆಗ್ರೋ ಮಾಲಕ ಮನೋಜ್ ಗೌಡ ಅಜ್ಜಿಕಲ್ಲು, ಇರ್ದೆ ಪಿಜೆ ಪೆಟ್ರೋಲಿಯಂ ಮಾಲಕ ಕೃಷ್ಣನಾಯ್ಕ, ಮಂಗಳೂರು ಮಹಾಲಕ್ಷ್ಮಿ ಅಟೋ ಡಿಸ್ಟ್ರಿಬ್ಯೂರ‍್ಸ್ ವ್ಯವಸ್ಥಾಪಕ ಜಯಕುಮಾರ್ ರೈ ಕೋಟೆ, ಬೆಂಗಳೂರು ಕಲಾನಿರ್ದೇಶಕ ವಿನೋದ್‌ರಾಜ್ ಕಜೆ, ಉದ್ಯಮಿ ಸಂತೋಷ್ ಕಣಿಯೂರು, ಪುತ್ತೂರು ದಿ ವೆಬ್ ಪೀಪಲ್‌ನ ಸಾಫ್ಟ್ವೇರ್ ಇಂಜಿನಿಯರ್ ರಜತ್ ಬಲ್ಲಾಳ್ ಬೆಟ್ಟಂಪಾಡಿ ಬೀಡು ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ವೈಭವದ ಶೋಭಾಯಾತ್ರೆ:
ಸೆ.15ರಂದು ಸಂಜೆ 4ರಿಂದ ಶ್ರೀಗಣೇಶ ಸ್ವಾಮಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಮಕ್ಕಳ ಕುಣಿತ ಭಜನೆ, ರೆಂಜ ಮಣಿಕಂಠ ಚೆಂಡೆ ಮೇಳದಿಂದ ಸಿಂಗಾರಿ ಮೇಳ, ರೆಂಜ ಟೈಗರ್ಸ್ ಮತ್ತು ವಿಶ್ವಹಿಂದೂ ಪರಿಷತ್ ಬೆಟ್ಟಂಪಾಡಿ ಇವರಿಂದ ಆಕರ್ಷಕ ಟ್ಯಾಬ್ಲೋ ಪ್ರದರ್ಶನ ನಡೆಯಲಿದೆ. ರಾತ್ರಿ 10.00ರಿಂದ ಚೆಲ್ಯಡ್ಕದ ಪುಣ್ಯನದಿಯಲ್ಲಿ ಶ್ರೀಗಣೇಶ ಸ್ವಾಮಿಯ ವಿಗ್ರಹದ ಜಲಸ್ತಂಭನ ಮಹೋತ್ಸವ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here