Thursday, February 9, 2023
Home ಇಂದಿನ ಕಾರ್ಯಕ್ರಮ

ಇಂದಿನ ಕಾರ್ಯಕ್ರಮ

ಪುತ್ತೂರು ಬದ್ರಿಯಾ ಮಸೀದಿಯ ಮದ್ರಸ ಹಾಲ್‌ನಲ್ಲಿ ಬೆಳಿಗ್ಗೆ ೯ಕ್ಕೆ ಗಲ್ಫ್ ಟೂರ‍್ಸ್ & ಟ್ರಾವೆಲ್ಸ್ ಸಂಸ್ಥೆಯಿಂದ ಹಜ್‌ಯಾತ್ರಿಕರಿಂದ ಪಾಸ್‌ಪೋರ್ಟ್ ಸ್ವೀಕಾರ ಸಮಾರಂಭದ ಉದ್ಘಾಟನೆ
ಪುತ್ತೂರು ಕೆಎಸ್‌ಆರ್‌ಟಿಸಿ ಮುಂಭಾಗದ ಸಂಕೀರ್ಣದಲ್ಲಿ, ಬಂಟರ ಭವನ ಬಳಿಯಿರುವ ಸುಧಾಭರಣೀ ಆಯುರ್ವೇದ ಚಿಕಿತ್ಸಾಲಯದಲ್ಲಿ ಸ್ವರ್ಣ ಬಿಂದು ಪ್ರಾಶನ
ಪುತ್ತೂರು ಮುಳಿಯ ಜ್ಯುವೆಲ್ಲರ್‌ನಲ್ಲಿ ಯುನಿಕ್ ಡೈಮಂಡ್ ಫೆಸ್ಟ್
ಕೌಕ್ರಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಪೆರಾಬೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಪೆರಾಬೆ ಗ್ರಾ.ಪಂ ೧ನೇ ವಾರ್ಡ್‌ನ ವಾರ್ಡುಸಭೆ
ಮಿತ್ತೂರು ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಇಡ್ಕಿದು ೧ನೇ ವಾರ್ಡ್, ಸೂರ್ಯ ಶಾಲೆಯಲ್ಲಿ ಮಧ್ಯಾಹ್ನ ೧೨ಕ್ಕೆ ಇಡ್ಕಿದು ೨ನೇ ವಾರ್ಡ್, ಇಡ್ಕಿದು ಗ್ರಾ.ಪಂ ಪಂಚಾಯತ್ ಸಭಾಭವನದಲ್ಲಿ ೩ಕ್ಕೆ ಇಡ್ಕಿದು ೩ನೇ ವಾರ್ಡ್, ಕುಳ ೧ನೇ ವಾರ್ಡ್, ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ಸಂಜೆ ೪ಕ್ಕೆ ಕುಳ ೨ನೇ ವಾರ್ಡ್‌ನ ವಾರ್ಡುಸಭೆ
ಟಿನೆಹರುನಗರ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ೧೧.೩೦ಕ್ಕೆ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ರಾತ್ರಿ ೯.೩೦ಕ್ಕೆ ಗೋಂದೋಳು ಪೂಜೆ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ
ಚಿಕ್ಕಮುಡ್ನೂರು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಬ್ರಾಹ್ಮಣ ಸಮಾರಾಧನೆ, ರಾತ್ರಿ ಭಜನೆ, ರಂಗಪೂಜೆ, ದೈವದ ಭಂಡಾರ ತೆಗೆಯುವುದು, ಪಿಲಿಭೂತ ದೈವದ ನೇಮನಡಾವಳಿ
ಕುಡಿಪ್ಪಾಡಿ ಅರ್ಕ ಶಾಲಾ ಮೈದಾನದಲ್ಲಿ ಸಂಜೆ ೩ರಿಂದ ಕೊಡಿಪ್ಪಾಡಿ ಶ್ರೀ ದುರ್ಗಾ ಯುವಕ ವೃಂದದ ವತಿಯಿಂದ ದಿ. ಕಿಶೋರ್ ಕುಮಾರ್ ಅರ್ಕರವರ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ-ಕಿಶೋರ್ ಟ್ರೋಪಿ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಭಾರತ ರಶ್ಮಿ sಸಂವಿಧಾನ ಹಬ್ಬ, ವಿವಿಧ ಸ್ಪರ್ಧೆಗಳು

ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ಬೆಳಿಗ್ಗೆ ೬ರಿಂದ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಏಕಾಹ ಭಜನೆ, ೧೧.೩೦ರಿಂದ ೫ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ಪೂಜೆ, ಸಂಜೆ ೬.೩೧ರಿಂದ ೪೫ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಜಾತ್ರೋತ್ಸವದ ಗೊನೆ ಮುಹೂರ್ತ

ಇರ್ದೆ ಬೆಂದ್ರ್‌ತೀರ್ಥ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ, ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ ಬೆಳಿಗ್ಗೆ ೯ರಿಂದ ಕಿನ್ನಿಮಾಣಿ ದೈವದ ನೇಮ

ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ನಂದಾದೀಪೋತ್ಸವ, ಉತ್ಸವ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಬಲಿ ಹೊರಡುವುದು, ದಂಡತೀರ್ಥ ಕೆರೆ ಉತ್ಸವ, ದೇವರಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆ, ಶ್ರೀರಾಮ ಸಂದರ್ಶನೋತ್ಸವ, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ, ಮಹಾಪೂಜೆ, ರಾತ್ರಿ ಕಲ್ಜಿಗದ ಕಾಳಿ ಮಂತ್ರದೇವತೆ ತುಳು ನಾಟಕ
ಆಲಂಕಾರು ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಕ್ಷೇತ್ರದಲ್ಲಿ ಬೆಳಿಗ್ಗೆ ೯ರಿಂದ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ಪಜ್ಜಡ್ಕ ಕಲ್ಕುಡ ಕಟ್ಟೆ ಸಮೀಪ ಕ್ಷೇತ್ರದ ದೈವಗಳ ಭಂಡಾರ ಆಗಮನ, ರಾತ್ರಿ ಶ್ರೀ ದೇವಿ ಉಳ್ಳಾಲ್ತಿ, ಕಲ್ಲುರ್ಟಿ, ಪಂಜುರ್ಲಿ, ಅಣ್ಣಪ್ಪ ದೈವಗಳಿಗೆ ನಡಾವಳಿ
ಗಾಳಿಮುಖ ಪುದಿಯವಳಪ್ಪ್ ಮಖಾಂ ಎದುರಿನ ಖಿಳರ್ ಮೈದಾನದಲ್ಲಿ ಮಖಾಂ ಉರೂಸ್ ಪ್ರಯುಕ್ತ ರಾತ್ರಿ ೮ರಿಂದ ಧಾರ್ಮಿಕ ಮತಪ್ರಭಾಷಣ
ಕೆದಂಬಾಡಿ ಗ್ರಾಮದ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ಗಣಪತಿ ಹವನ, ನಾಗತಂಬಿಲ, ದೈವಗಳ ತಂಬಿಲ, ಸಂಜೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡುವುದು, ರಾತ್ರಿ ಕೆಂಚಿರಾಯ ಸೇವೆ, ೮ರಿಂದ ಮಣಿಕಂಠ ಮಹಿಮೆ ತುಳು ಯಕ್ಷಗಾನ ಬಯಲಾಟ
ಶಾಂತಿಗೋಡು ಗ್ರಾಮ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಸಂಜೆ ಭಜನೆ, ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಬರುವುದು, ರಾತ್ರಿ ಶ್ರೀ ಶಿರಾಡಿ ದೈವದ ಭಂಡಾರ ತೆಗೆಯುವುದು
ಶಾಂತಿಗೋಡು ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಗಣಪತಿ ಹವನ, ಪಂಚವಿಂಶತಿ ಕಲಶಾಭಿಷೇಕ, ನಾಗತಂಬಿಲ, ರಕ್ತೇಶ್ವರಿ ದೈವಕ್ಕೆ ತಂಬಿಲ, ಸತ್ಯನಾರಾಯಣ ಪೂಜೆ

ವಿಟ್ಲಮುಡ್ನೂರು ಕುಳ ಗ್ರಾಮ ಕುಂಡಡ್ಕ ಗುರುನಗರದಲ್ಲಿ ಕುಂಡಡ್ಕ ಬಿಲವ ಸಂಘದ ವತಿಯಿಂದ ಸಂಜೆ ೬ರಿಂದ ವಾಸ್ತು ಪೂಜೆ, ವಿವಿಧ ವೈದಿಕ ವಿಧಿವಿಧಾನಗಳು
ಬೆಳಂದೂರು ಗ್ರಾಮ ಪಾತಾಜೆ ಅಭೀರಗುತ್ತು ಧರ್ಮದೈವ ಶ್ರೀ ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ದೈವಸ್ಥಾನದಲ್ಲಿ ಸಂಜೆ ೭ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರ ಬಲಿ, ಸುದರ್ಶನಹೋಮ, ಪ್ರೇತಾವಾಹನೆ, ಬಾಧಾ ಉಚ್ಚಾಟನೆ

ಒಳಮೊಗ್ರು ಗ್ರಾಮ ಬೊಳ್ಳಾಡಿ ತರವಾಡು ಮನೆಯಲ್ಲಿ ಧರ್ಮದೈವಗಳ ಧರ್ಮನೇಮದ ಗೊನೆ ಕಡಿಯುವುದು
ಟಿನರಿಮೊಗರು ಜೈನ ಬಸದಿಯ ಎದುರು ರವಿರಾಜ್ ಶೆಟ್ಟಿಯವರ ಮನೆಯಲ್ಲಿ ಸಂಜೆ ೪ರಿಂದ ಕಲ್ಲುರ್ಟಿ, ಪಂಜುರ್ಲಿ, ಅಗ್ನಿ ಗುಳಿಗ ದೈವದ ನೇಮೋತ್ಸವ
ಈಶ್ವರಮಂಗಲ ಪೇಟೆಯಲ್ಲಿ ಬೆಳಗ್ಗೆ ೯.೩೦ ಗಂಟೆಗೆ ಸ್ವಚ್ಛ ಶನಿವಾರದ ಅಂಗವಾಗಿ ಸ್ವಚ್ಚತಾ ಶ್ರಮದಾನ
ಕೆಯ್ಯೂರು ಗ್ರಾಮದ ಕೋಡಂಬು ನಡುಮನೆ ಪೂಜಾಸುದೇಶ್ ರೈಯವರ ನೂತನ ಮನೆ ‘ಆಸರೆ’ ಗೃಹಪ್ರವೇಶ, ಶ್ರೀ ಸತ್ಯನಾರಾಯಣ ಪೂಜೆ
ಶ್ರದ್ಧಾಂಜಲಿ ಸಭೆ
ಬನ್ನೂರು ಶಿವಪಾರ್ವತಿ ಭಜನಾ ಮಂದಿರದ ಸಭಾಭವನದಲ್ಲಿ ಸಂಜೆ ೭ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋಧನ ಸಂಯೋಜಕರಾಗಿದ್ದ ದಿ.ಬಡೆಕ್ಕಿಲ ಶಂಕರ ಭಟ್‌ರವರ ಶ್ರದ್ಧಾಂಜಲಿ ಸಭೆ

ಶಾಸಕರ ಕಾರ್ಯಕ್ರಮ
ಬೆಂಗಳೂರು ಬಿಜೆಪಿ ಕಾರ್ಯಕಾರಿಣಿ ಸಭೆ

error: Content is protected !!