ಇಂದಿನ ಕಾರ್ಯಕ್ರಮ

23/04/2024

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಚಿತ ವಸಂತ ವೇದ ಶಿಬಿರ
ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟರ ಪರ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ, ಅಣ್ಣಾಮಲೈಯವರಿಂದ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ದರ್ಬೆ ವೃತ್ತದಿಂದ ಬಸ್ ನಿಲ್ದಾಣದ ತನಕ, ಮಧ್ಯಾಹ್ನ ೩.೩೦ಕ್ಕೆ ಉಪ್ಪಿನಂಗಡಿಯಲ್ಲಿ, ಸಂಜೆ ೫.೩೦ಕ್ಕೆ ವಿಟ್ಲದಲ್ಲಿ ರೋಡ್ ಶೋ
ಪುತ್ತೂರು ಕಿಲ್ಲೆ ಮೈದಾನದಲ್ಲಿ ಸಂಜೆ ೪ಕ್ಕೆ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರ ಸಭೆ
ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಮುಳಿಯ ಚಿನ್ನೋತ್ಸವ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆಯ ಪ್ರಯುಕ್ತ ಸಂಜೆ ೬ರಿಂದ ಸಭಾ ಕಾರ್ಯಕ್ರಮ, ರಾತ್ರಿ ೭ರಿಂದ ರಕ್ಷೋಘ್ನ ಹೋಮ, sಸಂಜೆ ೪.೩೦ರಿಂದ ವಾಲಿವಧೆ-ಯಕ್ಷಗಾನ ತಾಳಮದ್ದಳೆ
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ೫ರಿಂದ ಮಹಾಗಣಪತಿ ಹೋಮ, ಅಂಕುರ ಪೂಜೆ, ೮ರಿಂದ ಭಜನೆ, ಮಧ್ಯಾಹ್ನ ೧೨ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ೧೨.೩೦ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ೬ರಿಂದ ಸಾಂಸ್ಕೃತಿಕ ವೈಭವ, ರಾತ್ರಿ ೭ರಿಂದ ಧಾರ್ಮಿಕ ಸಭೆ, ೯ರಿಂದ ಮರ್ಲ್
ಕಟ್ಟೊಡ್ಚಿ -ತುಳು ನಾಟಕ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ ಭಗವನ್ನಾಮಸಂಕೀರ್ತನೆ ಮಂಗಲ, ೯ರಿಂದ ಶ್ರೀಮದ್ರಾಮಾಯಣ ಮಹಾಯಜ್ಞ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ೧೧.೩೦ರಿಂದ ಧರ್ಮಸಂದೇಶ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ೨.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭ರಿಂದ ಶ್ರೀಹನುಮದ್ವ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ
ಹನುಮಗಿರಿ ಶ್ರೀ ಕ್ಷೇತ್ರದಲ್ಲಿ ಹನುಮ ಜಯಂತಿಯ ಪ್ರಯುಕ್ತ ಬೆಳಿಗ್ಗೆ ೧೦ಕ್ಕೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು
ಕಾಣಿಕೆ, ಮಂತ್ರಾಕ್ಷತೆ, ಸಂಜೆ ೬ರಿಂದ ‘ನಮೋ ಕೋದಂಡರಾಮ’ ಯಕ್ಷಗಾನ ಬಯಲಾಟ
ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಬೆಳಿಗ್ಗೆ ೬ರಿಂದ ಶ್ರೀ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಯ ೪೬ನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ
ಪಾಲ್ತಾಡಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ತಳಿರು ತೋರಣ, ರಾತ್ರಿ ೭ಕ್ಕೆ ಭಂಡಾರ ತೆಗೆಯುವುದು, ೭.೩೦ಕ್ಕೆ ಹೋಮ, ೯.೩೦ಕ್ಕೆ ಮುಗುರು ಮಲ್ಲಿಗೆ-ತುಳು ಯಕ್ಷಗಾನ
ಕೊಳ್ತಿಗೆ ಗ್ರಾಮ ಪೆರ್ಲಂಪಾಡಿ ದೊಡ್ಡಮನೆ-ಸ್ಥಳಮನೆಯ ತರವಾಡಿನಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಅನುಜ್ಞಾಕಲಶ, ೧೦ಕ್ಕೆ ನಾಗಪ್ರತಿಷ್ಠೆ, ಕ್ಷೀರಾಭಿಷೇಕ, ಕಲಶಾಬಿಷೇಕ, ಆಶ್ಲೇಷಬಲಿ, ಸಂಜೆ ೬ಕ್ಕೆ ಅಧಿವಾಸಹೋಮ, ತ್ರಿಕಾಲಪೂಜೆ
ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ತರವಾಡು ಮನೆಯಲ್ಲಿ ಬೆಳಿಗ್ಗೆ ೭.೩೦ರಿಂದ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ೨ರಿಂದ ಧರ್ಮದೈವ ಪಿಲಿಭೂತದ ನೇಮ, ಪರಿವಾರ ದೈವಗಳಿಗೆ ನೇಮೋತ್ಸವ
ಉತ್ತರಕ್ರಿಯೆ
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸದನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಸೋಮಪ್ಪ ಮೂಲ್ಯ ಕಟ್ಟೆಯವರ ಉತ್ತರಕ್ರಿಯೆ