ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ಹಾಜಿ ಎಚ್. ಯೂಸುಫ್, ಕಾರ್ಯದರ್ಶಿಗಳಾದ ಶುಕೂರ್ ಹಾಜಿ, ಯು.ಟಿ. ರವೂಫ್, ಖಜಾಂಚಿ ಮುಸ್ತಾಫ ಡಬಲ್ಫೋರ್, ಸದಸ್ಯರಾದ ಶಬೀರ್ ಕೆಂಪಿ, ಇಸ್ಮಾಯೀಲ್ ತಂಙಳ್, ತೌಸೀಫ್ ಯು.ಟಿ. ಸಿದ್ದೀಕ್ ಕೆಂಪಿ, ಯು.ಟಿ. ಫಯಾಝ್, ಇಸುಬು ಪೆದಮಲೆ, ಇರ್ಷಾದ್ ಯು.ಟಿ., ಇಸುಬು ಪೆದಮಲೆ, ಮುನೀರ್ ಎನ್ಮಾಡಿ, ಮುಹಮ್ಮದ್ ಕೂಟೇಲು ಮತ್ತಿತರರು ಉಪಸ್ಥಿತರಿದ್ದರು.