ಶ್ರೀ ಲಕ್ಷ್ಮೀದೇವಿ ಬೆಟ್ಟ, ರೈಲ್ವೇ ನಿಲ್ದಾಣದ ಬಳಿ, ಪುತ್ತೂರು ದ.ಕ. ಫೋನ್: 08251-231326, 9845757271

ಪುತ್ತೂರಿನ ರೈಲು ನಿಲ್ದಾಣದ ಬಳಿಯಲ್ಲಿರುವ ಕಿರಿದಾದ ಬೆಟ್ಟದ ತುದಿಯಲ್ಲಿ ನೆಲೆಯಾಗಿ ನಿಂತಿರುವ ‘ಶ್ರೀ ಲಕ್ಷ್ಮೀ ದೇವಿ’ಯ ದೇವಸ್ಥಾನವಿದೆ. ಆದರೆ ಈ ದೇವಿಯ ಮಹಿಮೆ ಮಾತ್ರ ಹಿರಿದಾದದ್ದು. ಈ ಜಾಗವನ್ನು ೧೯೭೯ರಲ್ಲಿ ಮುಸ್ಲಿಂ ಭಾಂದವರೋರ್ವರಿಂದ ಈಗಿನ ಧರ್ಮದರ್ಶಿ ಐತ್ತಪ್ಪ ಸಫಲ್ಯರವರು ಖರೀದಿ ಮಾಡಿದ್ದರು. ಅಲ್ಲೊಂದು ಸಣ್ಣ ಹಂಚಿನ ಮನೆಯಿತ್ತು. ತೇರೇ ಬಿನ ತೃಣಮಪಿ ನ ಚಲತಿ’ ಎಂಬಂತೆ ಪ್ರೇರಣಾ ಶಕ್ತಿಯಿಂದ ಈ ದೈವೀ ಸಂಕಲ್ಪವೇ ಈ ಕ್ಷೇತ್ರದ ಸಾನಿಧ್ಯವು ಕಾರಣಿಕ ಕ್ಷೇತ್ರ ಎಂಬುದು ಜ್ಯೋತಿಷ್ಯ ಪ್ರಶ್ನೆಯಿಂದ ತಿಳಿದುಬಂದಿದೆ. ಈ ಕ್ಷೇತ್ರದ ಕಾರಣಿಕವನ್ನು ಪುನಃ ಹತ್ತೂರಿಗೆ ಹರಡಿದ ಕೀರ್ತಿ ಧರ್ಮದರ್ಶಿ ಐತಪ್ಪ ಸಪಲ್ಯರದ್ದು.
ಕುಂಕುಮದಿಂದಲೇ ರಚನೆಗೊಂಡು ಆರಾದಿಸಲ್ಪಡುತ್ತಿರುವ ದೇವಿಗೆ ಶ್ರೀ ಕ್ಷೇತ್ರದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ ದೇವಿ ದರ್ಶನ ನಡೆಯುತ್ತದೆ. ದರ್ಶನ ಪಾತ್ರಿಯ ಮುಖಾಂತರ ದೇವಿ ಸತ್ಯ ಸಂದೇಶವನ್ನು ಸಾರುತ್ತಿದ್ದು, ಭಕ್ತರ ಸಮಸ್ಯೆಗಳಿಗೆ ಪರಿಹಾರ ಒದಗಿಬರುತ್ತದೆ. ಇತರ ಪರಿವಾರ ದೇವರುಗಳಾಗಿ ಕಲ್ಲುರ್ಟಿ, ಗುಳಿಗ ಹಾಗೂ ನಾಗ ಸಾನಿದ್ಯಗಳಿವೆ. ಇಲ್ಲಿ ಅನ್ನದಾನಕ್ಕೆ ವಿಶೇಷ ಮಹತ್ವವಿದೆ. ಶ್ರೀ ಕ್ಷೇತ್ರದಲ್ಲಿ ಏಪ್ರಿಲ್ ತಿಂಗಳಿನಲ್ಲಿ ವಾರ್ಷಿಕ ಮಹೋತ್ಸವ, ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ವಿಶೇಷ ಪೂಜೆ, ಚಂಡಿಕಾ ಹೋಮ, ಆಯುಧ ಪೂಜೆಗಳು ನಡೆಯುತ್ತದೆ. ಅಲ್ಲದೆ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಪ್ರತಿದಿನ ಅನ್ನಸಂತರ್ಪಣೆ, ವಿಷೇಶ ಮಹಾಪೂಜೆ, ಹೂವಿನ ಪೂಜೆ, ಅಲಂಕಾರ ಪೂಜೆ, ಚಂಡಿಕಾ ಹೋಮಗಳು ನಡೆಯುತ್ತಿದೆ. ಪ್ರತಿ ಸಂಕ್ರಮಣದಂದು ನಾಗದೇವರಿಗೆ ವಿಶೇಷ ಪೂಜೆ, ಆಶ್ಲೇಷ ಬಲಿ, ನಾಗತಂಬಿಲ, ಗುಳಿಗ ತಂಬಿಲ ಭಕ್ತ ಸಮುದಾಯದಿಂದ ಸೇವಾರೂಪವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಪ್ರಸ್ತುತ ಐತ್ತಪ್ಪ ಸಪಲ್ಯರವರು ದೇವಸ್ಥಾನದ ಧರ್ಮದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.