ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠ, ಪೋಳ್ಯ, ಪುತ್ತೂರು. ಫೋನ್: 08251-251444

ಪುತ್ತೂರು-ಮಂಗಳೂರು ರಸ್ತೆ ಯಲ್ಲಿ ಪುತ್ತೂರಿನಿಂದ 5 ಕಿಮೀ ದೂರದಲ್ಲಿ ಶ್ರೀ ಲಕ್ಷ್ಮೀವೆಂಕಟ್ರಮಣ ಮಠವಿದೆ. ಈ ಮಠಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದ್ದು ಈ ದೇವಸ್ಥಾನವು ಎರಡನೇ ತಿರುಪತಿಯೆಂದೇ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಇಲ್ಲಿನ ರಥಕ್ಕೂ ಅಷ್ಟೇ ಇತಿಹಾಸವಿದೆ. ಇಲ್ಲಿ ಪ್ರಧಾನ ದೇವರು ಲಕ್ಷ್ಮೀ ವೆಂಕಟ್ರಮಣ ದೇವರು. ಜೊತೆಗೆ ಭವಾನಿಶಂಕರ, ದೇವಿ, ಮೂರು ವಿಭಿನ್ನ ಶಕ್ತಿಯುಳ್ಳ ಗಣಪತಿ ಸೇರಿದಂತೆ ಪಂಚ ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಸ್ಥಳ ದೈವಗಳಾಗಿ ಧೂಮಾವತಿ ಮತ್ತು ಗುಳಿಗ ದೈವಗಳು ಆರಾಧಿಸಲ್ಪಡುತ್ತವೆ. ರಥಸಪ್ತಮಿಯ ದಿನದಂದು ವಾರ್ಷಿಕ ಜಾತ್ರೆ ಹಾಗೂ ರಥೋತ್ಸವವು ನಡೆಯುತ್ತಿದೆ. ಇಲ್ಲಿನ ದೇವರಿಗೆ ಕಲ್ಪೋಕ್ತ ಪಾನಕ ಪೂಜೆಯು ವಿಶೇಷ ಸೇವೆಯಾಗಿದೆ. ಅಲ್ಲದೆ ಜಾತ್ರಾ ಸಮಯದಲ್ಲಿ ಗರುಡ ರಥದಲ್ಲಿ ಗರುಡೋತ್ಸವ ಸೇವೆ ಹಾಗೂ ಕಟ್ಟೆಪೂಜೆಗಳು ನಡೆಯುತ್ತದೆ. ಪ್ರಸ್ತುತ ದೇವಸ್ಥಾನದಲ್ಲಿ ಉಮಾಶಂಕರ್ ಎ ಅಧ್ಯಕ್ಷರಾಗಿ ಮತ್ತು ಹನುಮಜೆ ಶ್ರೀಕೃಷ್ಣ ಭಟ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.