ಹಳೇನೇರಂಕಿ ಗ್ರಾಮ

ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಹಳೇನೇರಂಕಿ, ಫೋನ್: 08251-213604

ಉಪ್ಪಿನಂಗಡಿ ಕಡಬ ರಸ್ತೆಯಲ್ಲಿ ಸಿಗುವ ರಾಮಕುಂಜದಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ೩ ಕಿ.ಮೀ.ದೂರದ ಹಳೆನೇರೆಂಕಿಯಲ್ಲಿ ಈ ಗರಡಿ ಇದೆ. ಜೈನ ಮನೆತನದ ಆಡಳಿತದಲ್ಲಿದ್ದ ಹಳೆ ನೇರೆಂಕಿಯ ಗರಡಿಗೆ ಐತಿಹಾಸಿಕ ಹಿನ್ನೆಲೆ ಇದೆ. ಸುಮಾರು 40 ವರ್ಷಗಳಿಂದ ನಿಂತು ಹೋಗಿದ್ದ ಇಲ್ಲಿನ ನೇಮ, ಉತ್ಸವಗಳು ಪುತ್ತೂರಿನ ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್‌ರವರ ನೇತೃತ್ವದಲ್ಲಿ 2010ರಲ್ಲಿ ಮತ್ತೆ ಆರಂಭಗೊಂಡಿದೆ. ಶಿಥಿಲಗೊಂಡ ಗರಡಿಯನ್ನು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಳಿಸಲಾಗಿದೆ. ಪ್ರತಿ ವರ್ಷವೂ ನೇಮೋತ್ಸವ ನಡೆಯುತ್ತಿದೆ. ಕೋಟಿ ಚೆನ್ನಯರ ಗರಡಿಗಳಿಗೆ ಮಾದರಿಯಾಗಿರುವ ಇಲ್ಲಿನ ಗರಡಿಯಲ್ಲಿ ವೈಭವದ ಉತ್ಸವ ನಡೆಯುತ್ತದೆ.
ಆಡಳಿತ ಮೊಕ್ತೇಸರರು: ಎನ್.ಕೆ. ಆನಂದ ಕುಮಾರ್, ಮಾಸ್ಟರ್ ಪ್ಲಾನರಿ, ಪುತ್ತೂರು, ಆಡಳಿತ ಸಮಿತಿ ಅಧ್ಯಕ್ಷರು: ಟಿ. ನಾರಾಯಣ ಭಟ್, ಕಾರ್ಯದರ್ಶಿ: ಕಿರಣ್ ಕುಮಾರ್ ಪಾದೆ.

ವಿಷ್ಣುಮೂರ್ತಿ ದೇವಸ್ಥಾನ ಎರಟಾಡಿ ಫೋನ್: 08251-258525

ಶ್ರೀ ವಿಷ್ಣುಮೂರ್ತಿ ದೇವಾಲಯವು ಪೇಜಾವರ ಶ್ರೀಗಳವರ ಪೂರ್ವಾಶ್ರಮದ ಕುಟುಂಬಿಕರ ಪಾಲಿಗೆ ಬಂದುದು ನಾಲ್ಕು ತಲೆಮಾರುಗಳ ಹಿಂದೆ. ಶ್ರೀ ಪೇಜಾವರ ಶ್ರೀಗಳವರ ಅಜ್ಜ-ಶ್ರೀ ವೆಂಕಟರಮಣ ಉಪಾಧ್ಯಾಯ ಎನ್ನುವುದು ಅವರ ಆವಾಗಿನ ಹೆಸರು-ಎರಟಾಡಿ ಆಸ್ತಿಯನ್ನು ಖರೀದಿಸಿದಾಗ ಜೊತೆಗೆ ಈ ಪುರಾತನ ದೇವಾಲಯವು ಅವರ ಸುಪರ್ದಿಗೆ ಬಂದಿತು. ಎಲ್ಲ ವೈಭವಗಳನ್ನು ಕಳೆದುಕೊಂಡು ನಿತ್ಯ ಪೂಜೆಗೆ ಮಾತ್ರ ಸೀಮಿತವಾಗಿದ್ದ ಶ್ರೀ ದೇವರ ಆರಾಧನೆಯನ್ನು ಶ್ರೀಗಳವರ ಕುಟುಂಬಸ್ಥರು ನಡೆಸುತ್ತಾ ಬಂದರು. ಶ್ರೀ ವೆಂಕಟರಮಣ ಉಪಾಧ್ಯಾಯರ ಮೊಮ್ಮಗನಾಗಿ ಶ್ರೀ ಪೇಜಾವರ ಶ್ರೀಗಳವರು ಜನಿಸಿದರು. ಬಹುಶಃ ಈ ದೇವಾಲಯದ ಜವಾಬ್ದಾರಿಯನ್ನು ಹೊರಲು ಸಿದ್ಧರಾದ ಆ ಹಿರಿಯರಿಗೆ ಶ್ರೀ ದೇವರು ನೀಡಿದ ಕೊಡುಗೆ ಇದೆಂದು ನಾವು ತಿಳಿಯಬಹುದು. ಈ ದೇವರು ಸಂತಾನ ಪ್ರದನಾದ ಮಹಾವಿಷ್ಣುವಾಗಿರುವುದಾಗಿಯೂ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದೆ.
ಆಡಳಿತ ಮೊಕ್ತೇಸರರು: ಎಂ. ರಘುರಾಮ ಆಚಾರ್ಯ, ವ್ಯವಸ್ಥಾಪಕ ಮೊಕ್ತೇಸರರು: ಎಂ. ಹರಿನಾರಾಯಣ ಆಚಾರ್ಯ, ಸದಸ್ಯರುಗಳು: ರಮೇಶ ಉಪಾದ್ಯಾಯ ಕಲ್ಲೇರಿ, ಟಿ. ನಾರಾಯಣ ಭಟ್ ರಾಮಕುಂಜ, ಎ. ಮಾಧವ ಆಚಾರ್ಯ ಇಜ್ಜಾವು, ಕೆ. ಸಂತೋಷ್ ರಾವ್ ಕುಂಞಕ್ಕು, ಕೆ. ಸೇಸಪ್ಪ ರೈ ರಾಮಕುಂಜ, ಶೇಖರ ಗೌಡ ಕಟ್ಟಪುಣಿ, ಭಾಸ್ಕರ ಪೂಜಾರಿ ಬಟ್ಲಡ್ಕ, ವಿಶ್ವನಾಥ ರೈ ಎರಟಾಡಿ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಬ್ರಹ್ಮಬೈದರ್ಕಳ ಗರಡಿ ನೇರಂಕಿಗುತ್ತು ಹಳೆನೇರಂಕಿ ಅಂಚೆ ಪುತ್ತೂರು ದ.ಕ.-574241

*ವಿಷ್ಣುಮೂರ್ತಿ ಭಜನಾ ಮಂದಿರ ಹಳೆನೇರಂಕಿ