







ನೆಬುಲಸ್ ತಂಡ ಪ್ರಥಮ ,ತರಾಬ್ಲಸ್ ತಂಡ ದ್ವಿತೀಯ


ಪುತ್ತೂರು : ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನದಲ್ಲಿರುವ ಗ್ರೀನ್ ವ್ಯೂ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಪ್ರದರ್ಶನ ಸಂಪನ್ನಗೊಂಡಿತು. ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು. ಮದ್ರಸ ಮುಖ್ಯ ಶಿಕ್ಷಕ ಸಯ್ಯದ್ ಹುಸೈನ್ ಸಅದಿ ಸ್ವಾಗತಿಸಿದರು.



ಸಮಾರೋಪ ಸಮಾರಂಭದಲ್ಲಿ ಅನ್ಸಾರ್ ನಿರ್ದೇಶಕ ಸಿರಾಜ್ ಫ್ಯಾನ್ಸಿ, ಗಲ್ಫ್ ಕಮಿಟಿ ಪೂರ್ವ ಸದಸ್ಯ ಹಸೈನಾರ್ ಜೀರ್ಮುಕಿ, ಹಾರಿಸ್ ಬೋರುಗುಡ್ಡೆ, ಉನೈಸ್ ಪಿ. ಸಿ ವರ್ಲ್ಡ್,ಲತೀಫ್ ಸಖಾಫಿ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು. ಭಾಷಣ, ಖವ್ವಾಲಿ, ಖಿರಾಅತ್, ಗಾನ, ಕಥಾ ಪ್ರಸಂಗ, ದಫ್ ಪ್ರದರ್ಶನ ಮೊದಲಾದ ಸ್ಪರ್ಧೆಗಳು ನಡೆದವು.










