







ಪುಣಚ: ಬ್ರೇಕ್ ವೈಫಲ್ಯದಿಂದ ಎಲೆಕ್ಟ್ರಿಕಲ್ ಆಟೋರಿಕ್ಷಾ ರಸ್ತೆ ಬದಿಯ ಆಳಕ್ಕೆ ಬಿದ್ದ ಘಟನೆ ಸೆ.16ರಂದು ಬೆಳಿಗ್ಗೆ ಪುಣಚದ ಗ್ರಾಮದ ಕೊಚ್ಚಿಯಲ್ಲಿ ನಡೆದಿದೆ.



ಪುಣಚ ಗ್ರಾಮದ ಬಾಳೆಕುಮೇರಿ ಯೋಗೀಶ ಎಂಬವರು ತನ್ನ ಅಟೋದಲ್ಲಿ (KA70 AO 265)ಮನೆಯಿಂದ ಪರಿಯಾಲ್ತಡ್ಕ ಕಡೆಗೆ ಬರುತ್ತಿದ್ದ ವೇಳೆ ಕೊಚ್ಚಿ ಸಮೀಪ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.




ಚಾಲಕ ಯೋಗೀಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗಿದ್ದ ಅವರ ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ. ಎಂದು ತಿಳಿದುಬಂದಿದೆ.










