







ವಿಟ್ಲ: ಕೆದಿಲ ಹಾಲು ಉತ್ಪಾದಕರ ಸಹಕಾರ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್ ರವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.


ಬಳಿಕ ಮಾತನಾಡಿದ ಅವರು ಸಂಘವು 2025-26 ಸಾಲಿನಲ್ಲಿ 82272.600 ಲೀ. ಹಾಲು ಶೇಖರಣೆ ಮಾಡಿ ರೂ. 3278832.81 ವಿತರಣೆ ಮಾಡಿದೆ. ಸ್ಥಳೀಯವಾಗಿ 563298.00 ಮಾರಾಟ ಮಾಡಲಾಗಿದೆ. ದ.ಕ ಜಿಲ್ಲಾ ಹಾಲು ಒಕ್ಕೂಟಕ್ಕೆ ರೂ.3169823.24 ಮೌಲ್ಯದ ಹಾಲನ್ನು ಮಾರಾಟ ಮಾಡಲಾಗಿದೆ. ಸಂಘವು 600 ಚೀಲ ಪಶು ಆಹಾರ ಮಾದರಿ ಪೆಲೆಟ್ ಪಶು ಆಹಾರವನ್ನು ಒಕ್ಕೂಟದಿಂದ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಿ. ಸಂಘವು ರೂ. 1,582,77.22 ನಿವ್ವಳ ಲಾಭಗಳಿಸಿ. ಲಾಭಂಶವನ್ನು ನಿಯಮಾನುಸಾರ ಹಂಚಿಕೆ ಮಾಡಿ ಸದಸ್ಯರಿಗೆ ಶೇ.10ಡಿವಿಡೆಂಡ್ ಮತ್ತು ಪ್ರತಿ ಲೀಟರ್.ಗೆ.92 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸಂಘವು ಅಡಿಟ್ ವರದಿಯಲ್ಲಿ ‘ಎ’ಶ್ರೇಣಿ ಪಡೆದುಕೊಂಡಿದೆ ಎಂದರು.



ಇದೇ ಸಂದರ್ಭದಲ್ಲಿ ಸಂಘದಲ್ಲಿ ಹಾಲು ಪರೀಕ್ಷಕರಾಗಿ ನಿವೃತ್ತರಾಗಿದ್ದ ಈಶ್ವರಗೌಡ ರವರನ್ನು ಸನ್ಮಾನಿಸಲಾಯಿತು. 2025-26 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಾದ ಈಶ್ವರ ಗೌಡ ಕಾಂತುಕೋಡಿ, ಮುತ್ತಪ್ಪ ಗೌಡ ಕಾಂತುಕೋಡಿ, ಗಿರಿಜಾ ಎದುರ್ಕಳರವರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ದ.ಕ ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಚಂದ್ರಶೇಖರ ಭಟ್, ಸಂಘದ ವಿಸ್ತರಣಾಧಿಕಾರಿ ಎ. ಜಗದೀಶ್, ಸಂಘದ ಉಪಾಧ್ಯಕ್ಷ ಮುತ್ತಪ್ಪ ಗೌಡ ನಿರ್ದೇಶಕರು ಮಹಾಲಿಂಗ ಭಟ್, ಅನಂತ ಕೃಷ್ಣ, ಈಶ್ವರಗೌಡ, ಯತೀಶ, ಅಶ್ವಥ್, ಶಿವಪ್ಪ ನಾಯ್ಕ ಧರ್ಣಪ್ಪ ಗೌಡ, ಗಿರಿಜಾ, ಭಾಗೀರಥಿ.ಕೆ, ಲಕ್ಷಿಆರ್. ಭಟ್ ಉಪಸ್ಥಿತರಿದ್ದರು.
ಸಂಘದ ಸದಸ್ಯೆ ಭವ್ಯ ಪ್ರಾರ್ಥನೆ ಹಾಡಿದರು. ಸಂಘದ ನಿರ್ದೇಶಕ ಆಶ್ವಥ್ ವಂದಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಪ್ರವೀಣ್ ನಾಯ್ಕ ರವರು ವಿವಿಧ ಜವಾಬ್ದಾರಿ ನಿರ್ವಹಿಸಿದರು.










