ಜೇಸಿಐ ಆಲಂಕಾರು ಘಟಕದಲ್ಲಿ ಜೇಸಿ ಸಪ್ತಾಹದ ಸಮಾರೋಪ ಸಮಾರಂಭ

0

ಸಾಧಕರಿಗೆ ಸನ್ಮಾನ,ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಹಾಗೂ ಕಮಲಪತ್ರ ಪ್ರಶಸ್ತಿ ಪ್ರದಾನ

ನೆಲ್ಯಾಡಿ : ಜೇಸಿಐ ಆಲಂಕಾರು ಘಟಕದಲ್ಲಿ ಜೇಸಿ ಸಪ್ತಾಹದ ಸಮಾರೋಪ ಸಮಾರಂಭವು ಆಲಂಕಾರಿನ ಸಿ.ಎ ಬ್ಯಾಂಕಿನ ಸಭಾಂಗಣದಲ್ಲಿ ಘಟಕದ ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತದ ವಲಯ 15ರ ಪೂರ್ವ ವಲಯಾಧ್ಯಕ್ಷ ಜೇಸಿ ಅಶೋಕ್ ಚೂಂತಾರು,ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ,ಜೇಸಿಐ ಆಲಂಕಾರು ಘಟಕದ ಸ್ಥಾಪಕ ಜೇಸಿ ಪ್ರಶಾಂತ್ ಕುಮಾರ್ ರೈ ಹಾಗೂ ವಲಯಾಧಿಕಾರಿ ಜೇಸಿ ವಿನೀತ್ ಶಗ್ರಿತ್ತಾಯ ಭಾಗವಹಿಸಿದ್ದರು.


ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ತರಕಾರಿ ಬೆಳೆ ಬೆಳೆದು ಯಶಸ್ವಿಯಾಗಿರುವ ಆಲಂಕಾರು ಪರಿಸರದ ಪ್ರಗತಿಪರ ಕೃಷಿಕರಾದ ಶ್ರೀ ಶೀನಪ್ಪ ಗೌಡ ಸುರುಳಿ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ-ಕುಂದಾಪುರ ಇಲ್ಲಿನ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಸಹಾಯಕ ಪ್ರಾಧ್ಯಾಪಕ ಡಾ.ವಸಂತ ನಾಯ್ಕ ಇವರನ್ನು ಸನ್ಮಾನಿಸಲಾಯಿತು.


ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ
ಪರಿಸರ ಜಾಗೃತಿಗಾಗಿ ಕಸ್ವಿ ಎಂಬ ಮಗುವಿನ ಹೆಸರಿನಲ್ಲಿ ಸಂಘಟನೆಯೊಂದನ್ನು ಪ್ರಾರಂಭಿಸಿ,ಹಲವಾರು ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ‘ಕಸ್ವಿ ಹಸಿರು ದಿಬ್ಬಣ ‘ ಸಂಘಟನೆಗೆ ಸೆಪ್ಟೆಂಬರ್ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಂಘಟನೆಯ ಸಂಸ್ಥಾಪಕ ಕೇಶವ ರಾಮಕುಂಜ ,ಅಧ್ಯಕ್ಷೆ ಶ್ರದ್ಧಾ ಕೇಶವ್ ಹಾಗೂ ಕುಮಾರಿ ಕಸ್ವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುರಸ್ಕಾರವನ್ನು ಸ್ವೀಕರಿಸಿದರು.


ಕಮಲಪತ್ರ ಪ್ರಶಸ್ತಿ
ಕಾರ್ಯಕ್ರಮದಲ್ಲಿ 2023ರಲ್ಲಿ ಜೇಸಿಐ ಆಲಂಕಾರು ಘಟಕದ ಅಧ್ಯಕ್ಷರಾಗಿ ಹಲವಾರು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಪೂರ್ವಾಧ್ಯಕ್ಷ ಜೇಸಿ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಇವರಿಗೆ ಘಟಕದಿಂದ ಕೊಡಲ್ಪಡುವ ಕಮಲಪತ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ ಅಶೋಕ್ ಚೂಂತಾರು ಮಾತನಾಡುತ್ತಾ ಜೇಸಿಐ ಸಂಸ್ಥೆಯು ಈ ಸಮಾಜಕ್ಕೆ ಉತ್ತಮ ನಾಯಕರನ್ನು ಕೊಡುವ ಕೆಲಸ ಮಾಡುತ್ತಿದೆ,ಜೇಸಿಐ ಆಲಂಕಾರು ಘಟಕವು ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾಗಿದ್ದು,ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಪ್ರಸಾದ್ ಬಿ ಮಾತನಾಡುತ್ತಾ ಯಶಸ್ವಿ ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಜೇಸಿ ಸಂಸ್ಥೆಗಳು ಸದಾ ಮುಂದೆ ಇರುತ್ತವೆ,ಈ ವರ್ಷ ಜೇಸಿಐ ಆಲಂಕಾರು ಘಟಕದಲ್ಲಿ ಸಮಾಜಕ್ಕೆ ಉಪಯೋಗವಾಗುವ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದು ಶ್ಲಾಘನೀಯ ಎಂದು ತಿಳಿಸಿದರು.ಜೊತೆಗೆ ಅವರ ಕಾರ್ಯಕ್ಷೇತ್ರವಾದ ಸೌರಶಕ್ತಿಯ ಬಗ್ಗೆ ಮಾತನಾಡುತ್ತಾ ಪ್ರಸ್ತುತ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವೆಲ್ಲರೂ ಹೆಚ್ಚೆಚ್ಚು ಸೌರ ಇಂಧನವನ್ನು ಬಳಸುವ ಅನಿವಾರ್ಯತೆ ಉಂಟಾಗಿದೆ ಎಂದು ಸಭೆಗೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಜೇಸಿಐ ಆಲಂಕಾರು ಘಟಕದ ನಿಕಟಪೂರ್ವಾಧ್ಯಕ್ಷ ಜೇಸಿ ಗುರುರಾಜ್ ರೈ,ಮಹಿಳಾ ಜೇಸಿ ಸಂಯೋಜಕಿ ಜೇಸಿ ಕೃತಿಕಾ ಟಿ.ರೈ,ಜೂನಿಯರ್ ಜೇಸಿ ಅಧ್ಯಕ್ಷೆ ಕೀರ್ತಿ ಶೆಟ್ಟಿ,ಸ್ಥಾಪಕಾಧ್ಯಕ್ಷ ಜನಾರ್ದನ್ ಬಿ.ಎಲ್,ಪೂರ್ವ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ,ನಿವೃತ್ತ ಪ್ರಾಂಶುಪಾಲ ವಿಠಲ್ ರೈ ಕೊಣಾಲು ಗುತ್ತು,ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಜನಾರ್ದನ್ ಕದ್ರ,ಶಿಕ್ಷಕರಾದ ಜಯಪ್ರಕಾಶ್ ರೈ,ಕೇಶವ ಕೆ,ಇಡಾಳ ಶಾಲೆಯ ಎಸ್ ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಐ,ಸದಸ್ಯ ರಾಧಾಕೃಷ್ಣ ಗೌಡ ಕೆದ್ದೋಟೆ ,ಘಟಕದ ಪೂರ್ವಾಧ್ಯಕ್ಷರುಗಳು,ಸದಸ್ಯರು ಹಾಗೂ ಜೇಸಿಯೇತರ ಬಂಧುಗಳು ಉಪಸ್ಥಿತರಿದ್ದರು.


ಸಪ್ತಾಹದ ನಿರ್ದೇಶಕಿ ಜೇಸಿ ಹೇಮಲತಾ ಪ್ರದೀಪ್ ಒಂದು ವಾರದಲ್ಲಿ ನಡೆಸಲಾದ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು.ಜೇಸಿ ಧನ್ಯಶ್ರೀ ರೈ ಜೇಸಿವಾಣಿ ವಾಚಿಸಿದರು.ಜೇಸಿ ಪುರಂದರ ನಾಯ್ಕ,ಜೇಸಿ ಶ್ರುತಿ ಪ್ರಸಾದ್ ರೈ,ಜೇಸಿ ಜಯಶ್ರೀ ಅಲೆಪ್ಪಾಡಿ,ಜೇಸಿ ಸುನೀತಾ ರೈ,ಜೇಸಿ ಹರಿಶ್ಚಂದ್ರ ಕೆ,ಜೇಸಿ ಗಣೇಶ್ ಕಟ್ಟಪುಣಿ,ಜೇಸಿ ಪ್ರದೀಪ್ ರೈ ಮನವಳಿಕೆ ಸನ್ಮಾನಿತರ ಹಾಗೂ ಅತಿಥಿಗಳ ಪರಿಚಯ ಮಾಡಿದರು.ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ ಸ್ವಾಗತಿಸಿ,ಕಾರ್ಯದರ್ಶಿ ಜನಾರ್ದನ್ ಸುರ್ಯ ವಂದಿಸಿದರು.ಜೇಸಿ ಗುರುಪ್ರಸಾದ್ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here