ನಾಳೆ ಸೆ.17 ರಂದು ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ 64ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ

0

ಪುತ್ತೂರು: ಶ್ರೀ ವಿಶ್ವಕರ್ಮ ಸಮಾಜ ಸಭಾ ಬೀರಮಲೆ, ಪುತ್ತೂರು ವತಿಯಿಂದ ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ಬ್ರಹ್ಮಶ್ರೀ ನೆಟ್ಟಣಿಗೆ ಶ್ರೀ ಮಾಧವ ಶರ್ಮರ ಆಚಾರ್ಯತ್ವದಲ್ಲಿ 64ನೇ ವರ್ಷದ ಶ್ರೀ ವಿಶ್ವಕರ್ಮ ಹೋಮ, ಪೂಜಾ ಮಹೋತ್ಸವ ನಡೆಯಲಿದೆ.

ಬೆಳಿಗ್ಗೆ 6ರಿಂದ ಸಾಮೂಹಿಕ ಪ್ರಾರ್ಥನೆ, ಗಂಗಾಪೂಜೆ, ಗುರುಗಣಪತಿ ಪೂಜೆ, ವಿಶ್ವಕರ್ಮ ಧ್ವಜಾರೋಹಣ, ಪಂಚಗವ್ಯ ಶುದ್ಧಿ, ಪುಣ್ಯಾಹವಾಚನ, ನಾಂದಿಮಾತ್ವಿಕಾ ಪೂಜೆ, ಆಚಾರ್ಯವರಣ, ಮಂಡಲಾರಾಧನೆ, ಕಲಶಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಹೋಮ, ಪಂಚಬ್ರಹ್ಮ ಹೋಮ, ವಿಶ್ವಕರ್ಮ ಹೋಮಾದಿಗಳು, ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ, 2ರಿಂದ ಸಾಂಸ್ಕೃತಿಕ ವೈಭವ, ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ, ಭಜನೆ, ರಾತ್ರಿ ಕಲಶ ವಿಸರ್ಜನೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here