







ನೆಲ್ಯಾಡಿ: ಹಾರ್ಪಳ ಶ್ರೀ ಕುತ್ರಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಶೃಂಗೇರಿ ಮಠಾಧೀಶರ ಅಪೇಕ್ಷೆಯಂತೆ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅ.25ರಂದು ನಡೆಯಿತು.
ಅಧ್ಯಕ್ಷತೆಯನ್ನು ಶೀನಪ್ಪ ಗೌಡ ಬರಮೇಲು ವಹಿಸಿದ್ದರು. ನೆಲ್ಯಾಡಿಯ ಖ್ಯಾತ ಜೋತಿಷ್ಯರಾದ ಶ್ರೀಧರ ಗೋರೆಯವರು ಉದ್ಘಾಟಿಸಿ ಶುಭ ಹಾರೈಸಿದರು. ಉಪನ್ಯಾಸ ನೀಡಿದ ಪಟ್ಟೂರು ಶ್ರೀರಾಮ ಶಾಲೆ ಮುಖ್ಯಗುರು ಚಂದ್ರಶೇಖರ್ ಶೇಟ್ ಅವರು, ಅಸ್ಪೃಶ್ಯತೆ, ಮೇಲು ಕೀಳು, ಹಿಂದೂ ಸಮಾಜದ ಮಕ್ಕಳಿಗೆ ಧರ್ಮ ಶಿಕ್ಷಣದ ಕೊರತೆಯ ಕಾರಣ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.



ಧರ್ಮಭ್ಯುದಯ-ಧರ್ಮ ಶಿಕ್ಷಣ ಪುತ್ತೂರು ತಾಲೂಕು ಸಮಿತಿಯ ಬಾಲಕೃಷ್ಣ ಬೋರ್ಕರ್, ಆರ್.ಸಿ.ನಾರಾಯಣ ಅವರು ಧರ್ಮ ಶಿಕ್ಷಣದ ಮಹತ್ವವನ್ನು ವಿವರಿಸಿದರು. ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಬೆಳ್ತಂಗಡಿ ವಲಯ ಉಪ ವಲಯ ಅರಣ್ಯಧಿಕಾರಿ ರವಿಚಂದ್ರ ಪಡುಬೆಟ್ಟು, ಧನಂಜಯ ಗೌಡ ಕೊಡಂಗೆ ಶುಭ ಹಾರೈಕೆ ಮಾಡಿದರು.
ದೇವಸ್ಥಾನದ ಪ್ರಧಾನ ಆರ್ಚಕ ಶ್ರೀಧರ್ ನೂಜಿನ್ನಾಯ, ಧನಂಜಯ ಆಚಾರ್ಯ, ಚಂದ್ರಶೇಖರ್ ರೈ ರಾಮನಗರ, ಧನಂಜಯ ಗೌಡ ಮಧುಶ್ರಿ, ರಘುನಾಥ ರೈ ಹಾರ್ಪಳ, ಚಂದ್ರಶೇಖರ್ ಬಳ್ಳಿತಡ್ದ, ಕಡಬ ತಾಲೂಕು ಸಮಿತಿಯ ಉಮೇಶ್ ಸಾಯಿರಾಮ್, ಜನಾರ್ದನ ಆರಿಗ ಉಪಸ್ಥಿತರಿದ್ದರು. ರುಕ್ಮಯ ಗೌಡ ದಗ್ಗೋಡಿ, ಶಿವರಾಮ ಗೌಡ ಮಕ್ಕಿಗದ್ದೆ, ಸೀತಾರಾಮ ಗೌಡ ಕಾನಮನೆ, ಅನಿಲ್ ರೈ ಹಾರ್ಪಳ, ಶಿವಪ್ರಸಾದ್ ಮೂಲೆಮನೆ, ರಮೇಶ್ ಗೌಡ ನಾಲ್ಗುತ್ತು, ಗುಡ್ಡಪ್ಪ ಗೌಡ ತಿಮರಡ್ಡ, ಯೋಗೀಶ್ವರಿ ಪುಳಿತ್ತಡಿ, ದೇಜಪ್ಪ ಹೊಸಮನೆ, ರಾಧಾಕೃಷ್ಣ ಹುಣ್ಸೆಬೆಟ್ಟು, ಬಾಲಕೃಷ್ಣ ಗೌಡ ಹಾರ್ಪಳ, ರತ್ನಕುಮಾರಿ, ಶಿವಪ್ರಸಾದ್ ದುಗ್ಗಲ, ದೀಪಕ್, ರವಿಚಂದ್ರ ಅತ್ರಿಜಾಲು ಅತಿಥಿಗಳಿಗೆ ವೀಳ್ಯ ಅಡಿಕೆ ಕೊಟ್ಟು ಸ್ವಾಗತಿಸಿದರು.
ಮಾತಾಜಿ ಹಾಗೂ ಶ್ರೀಮಾನ್‌ಗಳಾಗಿ ಆಯ್ಕೆಯಾಗಿರುವ ವಸಂತಿ ದಗ್ಗೋಡಿ, ಚಿತ್ರ ಪಡಿಪಂಡ, ಶಂಕರ್ ಪಡುಬೆಟ್ಟು, ಭಾಗೀರಥಿ ಹುಣ್ಸೇಬೆಟ್ಟು, ಯೋಗೀಶ್ವರಿ ಪುಳಿತ್ತಡಿ, ಯಾದವ ಶೆಟ್ಟಿ ರಾಮನಗರ, ರಜನಿ ಟೀಚರ್, ರತ್ನಾವತಿ ಉಳಿತ್ತೊಟ್ಟು, ಸಂಕೇತ್ ಶೆಟ್ಟಿ ಕೊಲ್ಯೊಟ್ಟು, ಶೀನಪ್ಪ ಬರಮೇಲು ಅವರನ್ನು ಗೌರವಿಸಲಾಯಿತು.
ಭಾಗೀರಥಿ ಹುಣ್ಸೇಬೆಟ್ಟು ನಿರೂಪಿಸಿದರು. ರಜನಿ ಮಾತಾಜಿ ಸ್ವಾಗತಿಸಿದರು. ಬಾಲಕೃಷ್ಣ ಗೌಡ ಹಾರ್ಪಳ ವಂದಿಸಿದರು. ಇತ್ತೀಚೆಗೆ ನಿಧನರಾದ ಊರಿನ ಗೌಡರಾದ ಕೊರಗಪ್ಪ ಗೌಡ ಬಾಯ್ತ್ರೋಡಿ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಅವರ ಸ್ಮರಣಾರ್ಥ ದೇವಸ್ಥಾನಕ್ಕೆ 300 ಊಟದ ತಟ್ಟೆಯನ್ನು ಹಸ್ತಾಂತರ ಮಾಡಲಾಯಿತು.













