ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ‘ಕೂಲೆಸ್ಟ್ ಪ್ರಾಜೆಕ್ಟ್ ಇಂಡಿಯಾ’ ವಿಜ್ಞಾನ ಸಮಾವೇಶಕ್ಕೆಆಯ್ಕೆ

0

ಪುತ್ತೂರು: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೆ 19ರಂದು ಹೈದರಾಬಾದ್‌ನ ಸೈಬರ್‌ ಗಾರ್ಡನ್‌ ಕನ್‌ವೆನ್ಷನ್ ಸೆಂಟರ್‌ ಜುಬಿಲಿ ಎನ್‌ಕ್ಲೇವ್ ಹೈಟೆಕ್ ಸಿಟಿಯಲ್ಲಿ ನಡೆಯುವ ವಿಜ್ಞಾನ ಸಮಾವೇಶಕ್ಕೆ 10ನೇ ತರಗತಿಯ ವಿದ್ಯಾರ್ಥಿನಿಯರಾದ ದ್ರಿಶಾ ಪಿ (ನರಿಮೊಗರು ಪ್ರಶಾಂತ್ ಎಂ. ಪಿ ಮತ್ತುತ್ರಿವೇಣಿಯವರ ಪುತ್ರಿ), ಲಾವಣ್ಯ ನಾಯಕ್ ಕೆ (ಮುಂಡೂರು ಲವ ಕುಮಾರ್ ಮತ್ತು ನಳಿನಾಕ್ಷಿ ನಾಯಕ್‌ರವರ ಪುತ್ರಿ), ಬೃಂದಾಆರ್ ಕೆ(ಕೆಮ್ಮಿಂಜೆರಮೇಶ್ ಕೆ ಮತ್ತುಶೋಭಾರವರ ಪುತ್ರಿ) ಆಯ್ಕೆಯಾಗಿದ್ದಾರೆ.ಈ ವಿದ್ಯಾರ್ಥಿನಿಯರು ತಯಾರಿಸಿದ Med4U ಎಂಬ ವಿಜ್ಞಾನಯೋಜನಾ ವರದಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ.

ಈ ಯೋಜನಾ ವರದಿಯಲ್ಲಿ ಐದು ಮಂದಿ ವಿದ್ಯಾರ್ಥಿನಿಯರಿದ್ದು, ಉಳಿದ ಇಬ್ಬರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರಾಗಿದ್ದಾರೆ.ವಿದ್ಯಾರ್ಥಿನಿಯರಲ್ಲಿ ಕಂಪ್ಯೂಟರ್, ಡಿಜಿಟಲ್‌ತಂತ್ರಜ್ಞಾನ ಹಾಗೂ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಗೂಗಲ್ ಮತ್ತು ಎರಿಕ್ಸನ್ ಕಂಪೆನಿಗಳು ಜೊತೆಗೂಡಿ ಪ್ರಪಂಚದಾದ್ಯಂತ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಇವರಿಗೆ ಮೂಲತಃ ಪುತ್ತೂರಿನವರಾಗಿದ್ದ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಆನಂದವರ್ಧನ್‌ ರವರು ಒಂದು ವರ್ಷತರಬೇತಿ ನೀಡಿ ಜೊತೆಗೆ Optimist Club of Hillsboro ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್‌ನ್ನು ಕೊಡಿಸುವ ಮೂಲಕ ಯೋಜನಾ ವರದಿಗೆ ಸಹಕರಿಸಿರುತ್ತಾರೆ. ವಿಶ್ರಾಂತ ವಿಜ್ಞಾನ ಶಿಕ್ಷಕಿ ವಸಂತಿಕೆ., ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ವಿಜ್ಞಾನ ಶಿಕ್ಷಕಿ ಮಾನಸ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್‌ ಮತ್ತು ಪೋಷಕರು, ಇವರ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here