ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ

0

  • ಇಂಜಿನಿಯರ್ ಗಳ‌ ಕಲ್ಪನೆ ಅಪಾರವಾದುದು: ಡಾ. ರಾಘವೇಂದ್ರ ಹೊಳ್ಳ
  • ನಾವು ಮಾಡುವ ಕೆಲಸದಲ್ಲಿ ಆತ್ಮ ತೃಪ್ತಿ ಅಗತ್ಯ: ಎಸ್. ಕೆ. ಆನಂದ ಕುಮಾರ್
  • ಸೋಲು – ಗೆಲುವಿನ ಬಗ್ಗೆ ಯೋಚಿಸಿ ಮುಂದಡಿ ಇಡುವ ಕೆಲಸ ನಮ್ಮದಾಗಬೇಕು: ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ
  • ಸಂಬಂಧವನ್ನು ಗಟ್ಟಿ ಮಾಡುವ ಕೆಲಸ ಈ ಸಂಸ್ಥೆಯಿಂದ ಆಗುತ್ತಿದೆ: ಸತ್ಯನಾರಾಯಣ ಭಟ್ ಬಿ.
  • ಪೇಸ್ ನ‌ ಅಡಿಯಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳು ನಡೆದಿವೆ: ಹರೀಶ್ ಪುತ್ತೂರಾಯ

ಪುತ್ತೂರು: ಇಂಜಿನಿಯರ್ ಗಳು ಯಾವುದೇ ಕೆಲಸ ಮಾಡುವಾಗಲೂ ಎಚ್ಚರದಿಂದ ಇರುವುದು ಅಗತ್ಯ. ಇಂಜಿನಿಯರ್ ಗಳ‌ ಕಲ್ಪನೆ ಅಪಾರವಾದುದು. ಸಿವಿಲ್ ಇಂಜಿನಿಯರ್ಸ್ ಗಳ ಜಾಗವನ್ನು ತುಂಬುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ನಾವು ಮಾಡುವ ಕೆಲಸದಲ್ಲಿ ಕ್ವಾಲಿಟಿ ಅಗತ್ಯ. ನಾವು ಜೀವನದಲ್ಲಿ ಮಾಡಿದ ಸಹಾಯ ನಮ್ಮ ನೆಟ್ವರ್ಕ್ ಅನ್ನು ಗಟ್ಟಿಗೊಳಿಸುತ್ತದೆ. ಕೆಲಸದಲ್ಲಿ ತಪ್ಪೇ ಮಾಡದವ ಕೆಲಸವೇ ಮಾಡುವುದಿಲ್ಲ ಎಂದರ್ಥ ಎಂದು ಮಂಗಳೂರಿನ ಸ್ವಸ್ತಿಕಾ ಬ್ಯುಸಿನೆಸ್ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಡಾ. ರಾಘವೇಂದ್ರ ಹೊಳ್ಳ ಹೇಳಿದರು‌.

ಅವರು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಸೆ.15ರಂದು ನೆಹರೂನಗರದಲ್ಲಿರುವ ಮಾಸ್ಟರ್ ಪ್ಲಾನರಿಯ ಸರ್ ಎಂ.ವಿ. ಹಾಲ್ ನಲ್ಲಿ ನಡೆದ ಇಂಜಿನಿಯರ್ಸ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಸಂಸ್ಥೆಯ ನೌಕರರ ಬಗ್ಗೆ‌ ವಿಶ್ವಾಸ ಅಗತ್ಯ
ಉತ್ತಮ ಪೀಲ್ಡ್ ನಮ್ಮದಾಗಿದೆ.‌ ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಸಮಾಜಮುಖಿಯಾಗಿ ನಾವುಗಳು ಬಾಳೋಣ. ಮನೆಯ ಅಂದವನ್ನು‌‌ ಹೆಚ್ಚಿಸುವ ಕೆಲಸ ಇಂಜಿನಿಯರ್ ಗಳಿಂದ ಮಾತ್ರ ಸಾಧ್ಯ.ಬಹಳಷ್ಟು ಕೆಲಸ ಮಾಡಿದ ಅನುಭವ ನನಗಿದೆ. ಇಂಜಿನಿಯರ್ ಗಳ‌ ಕಷ್ಟದ ಬಗೆಗಿನ ಅರಿವು ನನಗಿದೆ ಎಂದರು.

ಪೇಸ್ ನ ಗೌರವಾಧ್ಯಕ್ಷರಾದ ಎಸ್. ಕೆ. ಆನಂದ ಕುಮಾರ್ ರವರು ಮಾತನಾಡಿ ಪೇಸ್ ನ ಸದಸ್ಯರುಗಳು ಇನ್ನಷ್ಟು ಸಕ್ರೀಯರಾಗಬೇಕಿದೆ. ಸರ್ . ಎಂ. ವಿಶ್ವೇಶ್ವರಯ್ಯ ರವರು‌ ನಡೆದು ಬಂದ ಹಾದಿ‌ ಇತರರಿಗೆ ಮಾದರಿ. ನಮ್ಮ ದೇಶದ ಅಭಿವೃದ್ದಿಗೆ ವಿಶ್ವೇಶ್ವರಯ್ಯ ರವರ ಕೊಡುಗೆ ದೊಡ್ಡದು. ನಾವು ಮಾಡುವ ಕೆಲಸದಲ್ಲಿ ಆತ್ಮ ತೃಪ್ತಿ ಅಗತ್ಯ. ಇಚ್ಚಿಸಿದ ಕೆಲಸ‌ ಸಿಗದಿದ್ದರೆ ಸಿಕ್ಕಿದ ಕೆಲಸವನ್ನು ನೆಚ್ಚಿ‌ ಮಾಡಿದರೆ ಯಶಸ್ಸು ಖಂಡಿತಾ. ಯಶಸ್ಸೆಂದರೆ ಅದು ದುಡ್ಡಲ್ಲ. ದುಡ್ಡು ಒಂದು ಭಾಗ ಅಷ್ಟೆ. ಸಮಾಜದ ಅಭಿವೃದ್ದಿಗೆ ನಮ್ಮಿಂದಾಗುವ ಕೊಡುಗೆಗಳನ್ನು ನೀಡುವ ಕೆಲಸಗಳಾಗಬೇಕು ಎಂದರು.

ಪುತ್ತೂರು ದ್ವಾರಕಾ ಕಾರ್ಪೊರೇಷನ್‌ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಹಾಗೂ ಪೇಸ್ ನ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ಭಟ್ ಬಿ.ರವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಪುತ್ತೂರು ದ್ವಾರಕಾ ಕಾರ್ಪೊರೇಷನ್‌ ನ ಮಾಲಕರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕರವರು ಮಾತನಾಡಿ ನೆಗೆಟೀವ್ ತಾಟ್ ಗಳು ಎಲ್ಲಾ ಕೆಲಸಗಳಲ್ಲಿಯೂ ಇರುತ್ತದೆ. ಆದರೆ ಅಡೆ – ತಡೆಗಳನ್ನು ಮೆಟ್ಟಿ ನಿಲ್ಲುವ ಮನಸ್ಸು ನಮ್ಮದಾಗಬೇಕು. ಜೀವನದಲ್ಲಿ ಸೋಲು -‌ ಗೆಲುವು ಸರ್ವೇ ಸಾಮಾನ್ಯ. ಸೋಲು – ಗೆಲುವಿನ ಬಗ್ಗೆ ಯೋಚಿಸಿ ಮುಂದಡಿ ಇಡುವ ಕೆಲಸ ನಮ್ಮದಾಗಬೇಕು ಎಂದರು.

ಪೇಸ್ ನ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ಭಟ್ ಬಿ.ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ತುಂಬಾ ಕುಶಿಕೊಟ್ಟ ಸಂಸ್ಥೆ ಇದು. ಪೇಸ್ ನಮ್ಮ‌ ಜ್ಞಾನ ವೃದ್ಧಿಗೆ ರಹದಾರಿಯಾಗಿದೆ. ಸಂಬಂಧವನ್ನು ಗಟ್ಟಿ ಮಾಡುವ ಕೆಲಸ ಈ ಸಂಸ್ಥೆಯಿಂದ ಆಗುತ್ತಿದೆ. ನಮ್ಮ ಅನುಭವವನ್ನು ಬಿಚ್ಚಿಡಲು ಒಂದು ಸುಂದರ ತಾಣವಾಗಿದೆ ಎಂದರು.

ಪುತ್ತೂರಾಯ ಕನ್ಸ್ ಸ್ಟ್ರೆಕ್ಷನ್ ನ ಹರೀಶ್ ಪುತ್ತೂರಾಯರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಪೇಸ್ ಗೆ ಪೂರ್ಣ ರೂಪ ನೀಡಿದವರು ನಮ್ಮ ಗೌರವಾಧ್ಯಕ್ಷರು. ಪೇಸ್ ನ ಮುಖ್ಯ ಉದ್ದೇಶವೇ ಇಂಜಿನಿಯರ್ ಗಳ‌ ಮಧ್ಯೆ ಭಾಂದವ್ಯ ಉಳಿಸವುದು, ಟೆಕ್ನೋಲಜಿ ಬಳಕೆ ಹಾಗೂ ಸಾಮಾಜಿಕ ಕಾರ್ಯಗಳಾಗಿವೆ. ಪೇಸ್ ನ‌ ಅಡಿಯಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳು ನಡೆದಿವೆ. ಲಾಭದ ಅಂಶವನ್ನು ಸಮಾಜಕ್ಕೆ ನೀಡುವ ಕೆಲಸ ನಮ್ಮಿಂದ ಆಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯರವರ ಆದರ್ಶವನ್ನು ನೆನಪುಮಾಡಿಕೊಂಡು ಅದನ್ನು ನಮ್ಮ ಬಾಳಿನಲ್ಲಿ ಅಳವಡಿಸುವ ಕೆಲಸವಾಗಬೇಕು ಎಂದರು.‌

ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ನ ಅಧ್ಯಕ್ಷರಾದ ಅರ್ಜುನ್ ಎಸ್. ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೇಸ್ ನ ಮಾಜಿ‌ ಅಧ್ಯಕ್ಷರಾದ ಸತ್ಯಗಣೇಶ್ ಭಟ್ ಎಂ. ಕಾರ್ಯದರ್ಶಿ ಶುಭಂ ಕನ್ಸ್ ಸ್ಟ್ರೆಕ್ಷನ್ ಪ್ರತೀಕ್ ಪಿ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೇಸ್ ಗೆ ನೂತನವಾಗಿ ಸೇರ್ಪಡೆಗೊಂಡ ಇಂಜಿನಿಯರ್ ಗಳಾದ ಅನಿರುದ್ದ್ ಹಾಗೂ ಅಭಿಷೇಕ್ ರವರನ್ನು‌ ಹೂ ನೀಡಿ‌ ಸ್ವಾಗತಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ :
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೇಸ್ ನ ಸದಸ್ಯರಾದ ಸತ್ಯನಾರಾಯಣ ಭಟ್ ರವರು ಪುತ್ರಿಯರಾದ ನಯನಾ , ನಂದನಾ, ಹರೀಶ್ ಪುತ್ತೂರಾಯರವರ ಪುತ್ರ ಆದಿತ್ಯ ಪುತ್ತೂರಾಯ, ಪುತ್ರಿ ಅದಿತಿ ಪುತ್ತೂರಾಯ ಹಾಗೂ ಜಯಪ್ರಕಾಶ್ ರವರ ಪುತ್ರಿ ಜಾಗೃತಿ ಜೆ.ಕೆ.ರವರನ್ನು‌ ಗೌರವಿಸಲಾಯಿತು‌. ಸನ್ಮಾನಿತರ ಹಾಗೂ ಅತಿಥಿಗಳ ಪರಿಚಯವನ್ನು ವಸಂತ ಭಟ್ , ಸತ್ಯಗಣೇಶ್ ಎಂ. ಹಾಗೂ ರಮೇಶ್ ಭಟ್ ಮಿತ್ತೂರುರವರು ಮಾಡಿದರು. ಪ್ರಸನ್ನ ಭಟ್ ಪ್ರಾರ್ಥಿಸಿದರು. ಅಧ್ಯಕ್ಷರಾದ ಅರ್ಜುನ್ ಎಸ್.ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಪ್ರತೀಕ್ ಪಿ.ಜಿ. ವಂದಿಸಿದರು. ಸೃಷ್ಠಿ ಕನ್ಸ್ ಸ್ಟ್ರಕ್ಷನ್ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಪೇಸ್ ನ ಆಶಯಗಳು ಬಹಳಷ್ಟಿದೆ
ಸರ್.ಎಂ. ವಿಶ್ವೇಶ್ವರಯ್ಯರವರ ಸಾಧನೆಗಳನ್ನು ಇಂಜಿನಿಯರ್ ಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಮಹಾನ್ ಚೇತನರ ನಡೆದು ಬಂದ ಹಾದಿ ಅವಿಸ್ಮರಣೀಯ. ನಾವು ಮಾಡುವ ಪ್ರೊಜೆಕ್ಟ್ ಗಳು ಉತ್ತಮ ಧ್ಯೇಯದಿಂದ ಕೂಡಿರಬೇಕು. ಇಂಜಿನಿಯರ್ ಗಳ ಬದುಕು ಚಾಲೆಂಜ್‌ನಿಂದಲೇ ಕೂಡಿರುತ್ತದೆ. ಪೇಸ್ ನ ಆಶಯಗಳು ಬಹಳಷ್ಟಿದೆ. ಅವೆಲ್ಲವನ್ನು ನಿಮ್ಮೆಲ್ಲರ ಸಹಕಾರದಲ್ಲಿ ಸಾಕಾರ ಮಾಡುವ ಪ್ರಯತ್ನ ಮಾಡಲಾಗುವುದು‌. ನಿಮ್ಮೆಲ್ಲರ ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇನೆ.
ಅರ್ಜುನ್ ಎಸ್.ಕೆ. ಅಧ್ಯಕ್ಷರು ಪೇಸ್

ಅರ್ಜುನ್ ಎಸ್.ಕೆ. ಅಧ್ಯಕ್ಷರು ಪೇಸ್

LEAVE A REPLY

Please enter your comment!
Please enter your name here