







ಪುತ್ತೂರು:ಇಲ್ಲಿನ ಮುರದಲ್ಲಿರುವ ‘ಶಿವಸದನ’ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಸೆಪ್ಟೆಂಬರ್ 14ರ ಭಾದ್ರಪದ ಶುಕ್ಲ ಚೌತಿಯಂದು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಗಣೇಶ ಹಬ್ಬವನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಗಣೇಶ ಚತುರ್ಥಿ ಆಚರಣೆಯ ಸಲುವಾಗಿ ಗಣಹೋಮವನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಶಿವಸದನದ ಗೌರವಾಧ್ಯಕ್ಷರಾದ ಶ್ರೀಯುತ ರಘುನಾಥರಾವ್ ಮತ್ತು ಶ್ಯಾಮಲಾ ರಾವ್ ದಂಪತಿ ಪ್ರಾಯೋಜಕರಾಗಿ ಭಕ್ತಿಭಾವದಿಂದ ನಡೆಸಿ ಕೊಟ್ಟರು. ಈ ದಿನದ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಗಾಗಿ, ಮುಂಬೈ ನಿವಾಸಿ ಜನಾರ್ದನ ರಾವ್ ಇವರು ಪ್ರತಿ ವರ್ಷವೂ ಶಿವಸದನಕ್ಕೆ ಸಹಕಾರ ನೀಡುತ್ತಿರುವುದರ ಜೊತೆಗೆ, ತನ್ನ ಪತ್ನಿ ಸಾಧನ ರಾವ್ ಅವರ ಸವಿ ನೆನಪಿನಲ್ಲಿ ಎಲ್ಲರಿಗೂ ವಿಶೇಷ ಭೋಜನವನ್ನು ಪ್ರಾಯೋಜಿಸಿರುವರು.



ಟ್ರಸ್ಟಿನ ಸದಸ್ಯೆ ಗಾಯತ್ರಿ ಪಿಲಿಂಜ, ಜನಾರ್ಧನ್ ರಾವ್ ದಂಪತಿಯ ಸಮಾಜ ಸೇವೆಯ ಬಗ್ಗೆ ವಿವರಿಸಿದರು. ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರೆ, ರೇಖಾ ಮತ್ತು ಅಶ್ವಿನಿ ಪ್ರಾರ್ಥಿಸಿದರು.ಗೌರವಾಧ್ಯಕ್ಷರಾದ ರಘುನಾಥ್ ರಾವ್ ರವರು ಕುಮಾರಿ ಡಾ. ಗಾನಾ ಮತ್ತು ಚಿ. ವೈಶಾಖನನ್ನು ಹೂ ನೀಡಿ ಸ್ವಾಗತಿಸಿದರು. ಟ್ರಸ್ಟಿನ ಸದಸ್ಯರಾದ ಚೇತನ್ ಶರ್ಮ ಡಾ. ಗಾನ ಪಿಲಿಂಜಾಳನ್ನು ಪರಿಚಯಿಸಿದರು.
ಬಳಿಕ, ಡಾ. ಗಾನಾ ಇವರ ನೇತೃತ್ವದಲ್ಲಿ ಗಾನ ನೃತ್ಯಾರಾಧನಾ“ಎಂಬ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿಬಂದು ಎಲ್ಲರ ಮನ ಸೂರೆಗೊಂಡಿತು. ಈ ಕಾರ್ಯಕ್ರಮವನ್ನು ನೀಡಿದ ಎಲ್ಲಾ ಕಲಾವಿದರಿಗೆ ಕೋಶಾಧಿಕಾರಿಗಳಾದ ದಿನಕರ ರಾವ್ ಧನ್ಯವಾದಗಳನ್ನು ಸಲ್ಲಿಸುತ್ತಾ, ಅವರ ಕಲಾಸೇವೆ ಇನ್ನಷ್ಟು ಜನರ ಮನಸ್ಸಿಗೆ ಸಂತೋಷ ಮತ್ತು ಭಕ್ತಿಯ ಬೆಳಕನ್ನು ನೀಡಲೆಂದು ಹಾರೈಸಿದರು.

ಈ ಕಾರ್ಯಕ್ರಮದ ಪೂರ್ವ ತಯಾರಿಯ ಜವಾಬ್ದಾರಿಯನ್ನು ಟ್ರಸ್ಟಿನ ಕಾರ್ಯದರ್ಶಿ ಕರುಣ್ ಬೆಳ್ಳೆ, ಟ್ರಸ್ಟ್ ಸದಸ್ಯರಾದ ಸಂತೋಷ್ ಉಜ್ಜೋಡಿ ವಹಿಸಿದ್ದರು. ರಾಧಿಕ ರಾವ್, ಗೀತಾರಾವ್. ನರೇಂದ್ರ ರಾವ್, ಪುರೋಹಿತರಾದ ಪ್ರಶಾಂತ ರಾವ್, ಮೋಹನದಾಸ ಪಿಲಿಂಜಾ, ಶ್ರೀಪತಿ ರಾವ್, ಪುತ್ತೂರಿನ ಬಂಧುಗಳು, ಹಿರಿಯರು, ವಿಶೇಷ ಮಕ್ಕಳು, ಶಿಕ್ಷಕಿಯರು, ಟ್ರಸ್ಟಿನ ಸದಸ್ಯರು , ಮ್ಯಾನೇಜರ್, ಮೆಟ್ರನ್ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.










