ಹಿರೇಬಂಡಾಡಿ ಉಳತ್ತೋಡಿಯಲ್ಲಿ 31ನೇ ವರ್ಷದ ಶ್ರೀ ಗಣೇಶೋತ್ಸವ

0

ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ಪೌರೋಹಿತ್ಯದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14 ಹಾಗೂ 15ರಂದು ನಡೆಯಿತು.


ಸೆ.14ರಂದು ಬೆಳಗ್ಗೆ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠೆ ಮಾಡಲಾಯಿತು. ಬಳಿಕ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸೆ.15ರಂದು ಬೆಳಗ್ಗೆ ಮಹಾಪೂಜೆ, ಶ್ರೀ ಮಹಾಗಣಪತಿ ಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಗಣಪತಿ ವಿಗ್ರಹದ ಶೋಭಾಯಾತ್ರೆಯು ದೇವಾಲಯದಿಂದ ಹೊರಟು ಮುರದಮೇಲು, ಶಿವನಗರ ಭಜನಾ ಮಂದಿರದ ತನಕ ಹೋಗಿ ಅಲ್ಲಿಂದ ಅದೇ ಮಾರ್ಗವಾಗಿ ಬಂದು ಕುಮಾರಧಾರ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಕೇರಳ ಕಾಸರಗೋಡು ಪ್ರಿಯದರ್ಶಿನಿ ಕೈಕೊಟ್ಕಳಿ ತಚಂಗಡ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಪಡ್ಯೊಟ್ಟು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕನ್ಯಾನ, ಕಾರ್ಯದರ್ಶಿ ನವೀನ್ ಪಡ್ಪು, ಕೋಶಾಧಿಕಾರಿ ಬೆಳಿಯಪ್ಪ ಗೌಡ ಜಾಲು ಮತ್ತು ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಬೈಲುವಾರು ಸಂಚಾಲಕರು, ಉತ್ಸವ ಸಮಿತಿ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಭಜನಾ ಮಂಡಳಿ ಹಾಗೂ ಗ್ರಾಮಸ್ಥರು ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here